ಮಹಿಳೆಯು ಅಲಂಕಾರಿ ಪ್ರಿಯಳು ಹಾಗೂ ಸೌಂದರ್ಯ ಲಹರಿ, ಕೂಡ ಕೈತುಂಬ ಬಳೆ, ಹಣೆಯಲ್ಲಿ ಸಿಂಧೂರ, ತಲೆಯಲ್ಲಿ ಹೂವು, ಕೆನ್ನೆಯಲ್ಲಿ ಅರಿಶಿನ, ಕಾಲಲ್ಲಿ ಕಾಲುಂಗರವನ್ನು ಧರಿಸುವುದು ಎನ್ನುವುದು ಹಿಂದೂ ಸಂಪ್ರದಾಯದಲ್ಲಿ ಸುಮಂಗಳೆಯರ ಲಕ್ಷಣ ಎಂದು ಹೇಳಲಾಗುವುದು.
ಮಂಗಳ ಕಾರ್ಯವನ್ನು ಮಾಡುವಾಗ ಸುಮಂಗಲಿಯರು ಕಡ್ಡಾಯವಾಗಿ ಈ ರೀತಿ ಅಲಂಕಾರವನ್ನು ಮಾಡಿಕೊಳ್ಳಬೇಕು. ಮಹಿಳೆಯರು ಹಣೆಯಲ್ಲಿ ಸಿಂಧೂರವನ್ನು ಇಡುತ್ತಾರೆ, ಅದಕ್ಕೆ ವೈಜ್ಞಾನಿಕ ಮುಖ್ಯ ಕಾರಣ ಇದೆ. ಹಣೆಗೆ ಸಿಂಧೂರ ಇಡುವುದ್ದರಿಂದ, ಮನಸ್ಸು ನಿಯಂತ್ರಣದಲ್ಲಿ ಇರುತ್ತದೆ, ಹಾಗೂ ಮನಸ್ಸು ಏಕಾಗ್ರತೆ ಆಗುತ್ತದೆ. ಮತ್ತು ದೇವತೆಗಳ ಆಶೀರ್ವಾದ ದೊರೆಯುವುದು, ಎಂದು ಹೇಳಲಾಗುವುದು.
ಮಹಿಳೆಯರು ಧರಿಸುವ ಬಳೆ, ಕಾಲುಂಗುರ, ಕಿವಿಯೋಲೆ, ಉಂಗುರ, ಸಿಂಧೂರ ಇಡುವುದು ಎಲ್ಲವೂ ವೈಜ್ಞಾನಿಕ ಹಿನ್ನೆಲೆಯನ್ನು ಪಡೆದುಕೊಂಡಿದೆ . ಮಹಿಳೆಯರು ಧರಿಸುವ ಬಳೆಯ ಬಗ್ಗೆ ಸಾಕಷ್ಟು ಕಥೆ ಇದೆ. ಮನೆಯಲ್ಲಿ ಬಳೆಗಳ ಶಬ್ದ ಮಾಡುವ ಕೈಗಳಿರಬೇಕು. ಬಳೆಯನ್ನು ಧರಿಸಿರುವ ಮಹಿಳೆಯರು ಮನೆಯಲ್ಲಿ ಇರಬೇಕು.
ಆಗಲೇ ಮನೆಯಲ್ಲಿ ಸುಖ, ಶಾಂತಿ, ಸಮೃದ್ಧಿ ತುಂಬಿರುತ್ತದೆ. ಮಹಿಳೆಯ ಸೌಂದರ್ಯ ಹಾಗೂ ಘನತೆಯನ್ನು ಹೆಚ್ಚಿಸುವ ಬಳೆಯ ಸಾಕಷ್ಟು ಸಾಂಪ್ರದಾಯಿಕ ಹಾಗೂ ವೈಜ್ಞಾನಿಕ ಹಿನ್ನೆಲೆಯನ್ನು ಒಳಗೊಂಡಿದೆ. ಮಹಿಳೆಯರು ಏಕೆ ಬಳೆಯನ್ನು ತೊಡಬೇಕು ಅದರ ಹಿನ್ನೆಲೆ ಹಾಗೂ ಮಹತ್ವದ ಬಗ್ಗೆ ಸಾಕಷ್ಟು ವಿಚಾರಗಳಿವೆ. ಮಹಿಳೆಯರು ಪುರುಷರಗಿಂತ ದೈಹಿಕವಾಗಿ. ದುರ್ಬಲವಾಗಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವಾಗಿ. ಮಹಿಳೆಯರ ಉತ್ತಮ ಆರೋಗ್ಯ ಕಾಪಾಡುತ್ತದೆ ಎಂಬ ನಂಬಿಕೆ ಇದೆ.
ಚಿನ್ನ ಅಥವಾ ಬೆಳ್ಳಿ ಮುಂತಾದ ಬೆಲೆ ಬಾಳುವ ಲೋಹಗಳಿಂದ ತಯಾರಾದ ಆಭರಣಗಳನ್ನು ಧರಿಸುವುದರಿಂದ ಮಹಿಳೆಯರಿಗೆ ಶಕ್ತಿಯನ್ನು ಒದಗಿಸುತ್ತದೆ ಹಾಗೂ ಅವುಗಳನ್ನು ಧರಿಸಿದ ಮಹಿಳೆಯರಿಗೆ ಒಂದು ಬಗೆಯ ಧನಾತ್ಮಕ ಕಂಪನಗಳು ಅವರ ಸುತ್ತ ರಕ್ಷಣೆಯನ್ನು ಒದಗಿಸುತ್ತವೆ. ಹಾಗೂ ಪುರಾತನ ಇತಿಹಾಸದ ಪ್ರಕಾರ ಚಿನ್ನ ಅಥವಾ ಬೆಳ್ಳಿಯಿಂದ ಮಾಡಲ್ಪಟ್ಟ ಬೆಳೆಯು, ಮಹಿಳೆಯರ ಚರ್ಮದ ಜತೆಗೆ ಸಂಪರ್ಕಕ್ಕೆ ಬಂದಾಗ ಅಲ್ಲಿ
ಉಂಟಾಗುವ ಸಂಘರ್‌ಷಣೆಯಿಂದಾಗಿ ಅದರ ಗುಣಗಳು ಮತ್ತು ವೈಶಿಷ್ಟಗಳ ದೇಹವನ್ನು ಪ್ರವೇಶಿಸುತ್ತದೆ. ಒಂದಕ್ಕೊಂದು ತಾಗುವ ಮೂಲಕ ಬಳೆಗಳಿಂದ ಉಂಟಾಗುವ ಕಿಣಿ ಕಿಣಿ ಶಬ್ದವು ಋಣಾತ್ಮಕ ಕಂಪನವನ್ನು ದೂರವಿರಿಸುತ್ತದೆ ಹಾಗೂ ಅನಪೇಕ್ಷ ಶಕ್ತಿಯು ಹತ್ತಿರ ಸುಳಿದಂತೆ ಮನೆಯಿಂದ ದೂರವಿರುತ್ತದೆ, ಹಿರಿಯರು ನಂಬಿಕೆಯ ಪ್ರಕಾರ ಮನೆಯಲ್ಲಿ ಬಳೆಗಳ ಶಬ್ದವು ನಮ್ಮ ಪವಿತ್ರ ದೇವಾನುದೇವತಿಗಳ ಅನುಗ್ರಹಕ್ಕೆ ಪಾತ್ರ ವಾಗುವಂತೆ ಸುಖೀ ವಾಗಿರುಸುತ್ತದೆ.
ಸುನಂದಾ ಪಟ್ಟಣಶೆಟ್ಟಿ
ಮ.ವಿ.ವಿ. ವಿಜಯಪುರ