Advertisement
ಬಂಟ್ವಾಳ, ನ. 27: ಉಳ್ಳಾಲ ಹಾಗೂ ಕೋಟೆಕಾರು ನಗರ ಸ್ಥಳೀಯಾ ಡಳಿತ ಸಂಸ್ಥೆಗಳು ಸೇರಿದಂತೆ 25 ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಸಜೀಪಮುನ್ನೂರು ಗ್ರಾಮದ ಆಲಾಡಿಯಲ್ಲಿ ಜಾಕ್‌ವೆಲ್ ನಿರ್ಮಾಣ ಗೊಳ್ಳುತ್ತಿದ್ದು, ಈಗಾಗಲೇ ಶೇ. 70ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
Related Articles
Advertisement
ಉಳ್ಳಾಲ ನಗರಸಭೆ, ಕೋಟೆಕಾರು ಪ.ಪಂ. ಸೇರಿ ಸುಮಾರು 25 ಗ್ರಾಮಗಳಿಗೆ ಈ ಯೋಜನೆಯಿಂದ ನೀರು ಪೂರೈಕೆ ಯಾಗಲಿದ್ದು, ಬಂಟ್ವಾಳದ ಸಜೀಪ ಮುನ್ನೂರು, ಮಂಚಿ, ವೀರಕಂಭ, ಬೋಳಂತೂರು, ಸಜೀಪ ನಡು ಗ್ರಾಮ ಗಳಿಗೆ ನೀರು ಪೂರೈಕೆಯಾಗಲಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಪೈಪ್‌ಲೈನ್ ಹಾದುಹೋಗುವ ಗ್ರಾಮಗಳಿಗೂ ನೀರು ಪೂರೈಕೆಯ ಭರವಸೆ ನೀಡಿದ್ದಾರೆ ಎಂದು ಗ್ರಾ.ಪಂ.ನವರು ಹೇಳುತ್ತಾರೆ.
ಪ್ರಾರಂಭದಲ್ಲಿ ಆಕ್ಷೇಪ : ಬಂಟ್ವಾಳದ ಸಜೀಪಮುನ್ನೂರಿಂದ ನಮ್ಮ ಗ್ರಾಮಕ್ಕೆ ನೀರು ಕೊಡದೆ ಉಳ್ಳಾಲಕ್ಕೆನೀರು ಕೊಂಡುಹೋಗುತ್ತಿದ್ದಾರೆಎಂದು ಪ್ರಾರಂಭದಲ್ಲಿ ಈಯೋಜನೆಗೆ ಆಕ್ಷೇಪ ಕೇಳಿಬಂದಿತ್ತು.ಸ್ಥಳೀಯ ಸಜೀಪಮುನ್ನೂರುಗ್ರಾ.ಪಂ.ಕೂಡ ಯೋಜನೆಗೆ ವಿರೋಧ ವ್ಯಕ್ತಪಡಿಸಿತ್ತು. ಆದರೆ ಬಳಿಕ ಬಂಟ್ವಾಳದ ಕೆಲವು ಗ್ರಾಮಗಳಿಗೆ ಯೋಜನೆಯಿಂದ ನೀರು ಲಭ್ಯವಾಗಲಿದೆ ಎಂದು ಮನದಟ್ಟಾದ ಬಳಿಕ ಯೋಜನೆಯ ಅನುಷ್ಠಾನಕ್ಕೆ ಅವಕಾಶ ನೀಡಿದ್ದರು.
1.98 ಕೋ.ರೂ. ಯೋಜನೆ : ಬಂಟ್ವಾಳ ಹಾಗೂ ಮಂಗಳೂರಿನ 25 ಗ್ರಾಮಗಳಿಗೆ ನೀರನ್ನು ಪೂರೈಸುವದೃಷ್ಟಿಯಿಂದ ಆಲಾಡಿಯಿಂದ ನೀರನ್ನೆತ್ತುವ ದೃಷ್ಟಿಯಿಂದ ಜಾಕ್‌ವೆಲ್‌ನಿರ್ಮಾಣ ಮಾಡಲಾಗುತ್ತಿದೆ. ಸುಮಾರು 1.98 ಕೋ.ರೂ.ಗಳಲ್ಲಿಅನುಷ್ಠಾನಗೊಳ್ಳಲಿದೆ. ಈಗಾ ಗಲೇ 70ಶೇ. ಕಾಮಗಾರಿ ನಡೆದಿದ್ದು, 6 ತಿಂಗಳಲ್ಲಿ ಕಾಮಗಾರಿ ಪೂರ್ಣ ಗೊಳ್ಳಲಿದೆ. –ಶೋಭಾಲ, ಸಹಾಯಕ ಎಂಜಿನಿಯರ್ ಕೆಯುಡಬ್ಲ್ಯು ಎಸ್‌ಡಿಬಿ, ಮಂಗಳೂರು
-ಕಿರಣ್ ಸರಪಾಡಿ