Advertisement

ಕೊರೊನಾ ಕಳವಳ : ಅಲ್‌-ಅಖ್ಸಾ ಮಸೀದಿ ಬಂದ್‌

01:17 AM Mar 21, 2020 | Team Udayavani |

ಜೆರುಸಲೇಮ್: ಇಸ್ಲಾಂನ 3ನೇ ಅತಿ ಪವಿತ್ರ ಸ್ಥಳ ಎಂದು ಪರಿಗಣಿಸಲ್ಪಟ್ಟ  ಅಲ್‌-ಅಖ್ಸಾ ಮಸೀದಿಯನ್ನು ಮುಚ್ಚಲಾಗಿದೆ. ಅನಿರ್ದಿಷ್ಟಾವಧಿಗೆ ಮಸೀದಿ ಬಂದ್‌ ಇರಲಿದ್ದು, ಪ್ರಾರ್ಥನೆಗಳನ್ನು ಹೊರ ಆವರಣದಲ್ಲಿ ನಡೆಸಲಾಗುವುದು ಎಂದು ನಿರ್ದೇಶಕ ಶೇಖ್‌ ಒಮರ್‌ ಕಿಸ್ವಾನಿ ತಿಳಿಸಿದ್ದಾರೆ.

Advertisement

ಇರಾನ್‌ನಲ್ಲಿ ರವಿವಾರ ಒಂದೇ ದಿನ 113 ಮಂದಿ ಕೊರೊನಾಗೆ ಬಲಿಯಾಗಿದ್ದು, ಮೃತರ ಸಂಖ್ಯೆ 724ಕ್ಕೆ ತಲುಪಿದೆ. ಜನರು ಯಾರೂ ಎಲ್ಲಿಗೂ ಪ್ರಯಾಣಿಸದೇ, ಮನೆಯಲ್ಲೇ ಉಳಿಯುವಂತೆ ಸೂಚಿಸಲಾಗಿದೆ. ಈಗಾಗಲೇ ಅಮೆರಿಕದ ನಿರ್ಬಂಧವನ್ನೂ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಇರಾನ್‌ ಆರೋಗ್ಯ ಸೌಲಭ್ಯಗಳ ತೀವ್ರ ಕೊರತೆ ಎದುರಿಸುವ ಭೀತಿಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next