Advertisement

ಓ ಮೈ ಲವ್‌ನಲ್ಲಿ ಅಕ್ಷಿತ್‌

01:46 PM Dec 18, 2020 | Suhan S |

ಹಿರಿಯ ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಸದ್ದಿಲ್ಲದೇ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ. ಅದು”ಓ ಮೈಲವ್‌’. ಸ್ಮೈಲ್‌ ಶ್ರೀನು ಈ ಚಿತ್ರದ ನಿರ್ದೇಶಕರು. ಈಗಾಗಲೇ”ತೂಫಾನ್‌’, “ಬಳ್ಳಾರಿ ದರ್ಬಾರ್‌’, “18ಟು 25′ ಚಿತ್ರಗಳನ್ನು ನಿರ್ದೇಶಿಸಿರುವ ಸ್ಮೈಲ್‌ ಶ್ರೀನು ಈಗ ಲವ್‌ ಸ್ಟೋರಿ ಕಥೆಯನ್ನು ಸಿನಿಮಾ ಮಾಡಲು ಮುಂದಾಗಿದ್ದಾರೆ.

Advertisement

ಇದನ್ನೂ ಓದಿ : ಹೊಸ ವರ್ಷಕ್ಕೆ ಕಸ್ತೂರಿ ಮಹಲ್ ‌ಟೀಸರ್‌

ಈ ಚಿತ್ರದಲ್ಲಿ ಹದಿ ಹರೆಯದ ಪ್ರೇಮ ತುಡಿತಗಳ ಜೊತೆ ಜೊತೆಗೆ ಕಮರ್ಷಿಯಲ್‌ಅಂಶಗಳನ್ನಿಟ್ಟುಕೊಂಡುಈ ಸಿನಿಮಾ ಮಾಡುತ್ತಿದ್ದಾರೆ. ಜಿಸಿಬಿರಾಮಾಂಜಿನಿ ಕಥೆ ಬರೆಯುವುದರ ಜೊತೆಗೆ ಜಿಸಿಬಿ ಪ್ರೊಡಕ್ಷನ್ಸ್‌ ಬ್ಯಾನರ್‌ ಅಡಿಯಲ್ಲಿ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಚಿತ್ರಕಥೆ, ಸಂಭಾಷಣೆ ಹಾಗೂ ನಿರ್ದೇಶನದ ಜವಾಬ್ದಾರಿ ಸ್ಮೈಲ್‌ ಶ್ರೀನು ಅವರದ್ದು.

ಚಿತ್ರದಬಗ್ಗೆಮಾತನಾಡುವ ಶ್ರೀನು, ಇದೊಂದು ರೊಮ್ಯಾಂಟಿಕ್‌ ಲವ್‌ಸ್ಟೋರಿ. ಹಾಗಂತ ಕೇವಲ ಅಷ್ಟಕ್ಕೇ ಸೀಮಿತವಾಗಿಲ್ಲ. ಇದರ ಜೊತೆಗೆ ಫ್ಯಾಮಿಲಿ ಸೆಂಟಿಮೆಂಟ್‌, ಆ್ಯಕ್ಷನ್‌ ಕೂಡಾ ಇದ್ದು,ಚಿತ್ರ ಅದ್ಧೂರಿಯಾಗಿ ತಯಾರಾಗಲಿದೆ.ಈ ಹಿಂದೆ ಈ ತರಹದ ‌ಲವ್‌ಸ್ಟೋರಿ  ಬಂದಿಲ್ಲ ಎನ್ನುವುದು ಶ್ರೀನು ಮಾತು.ಚಿತ್ರದ ನಾಯಕಿ, ತಾಂತ್ರಿಕವರ್ಗದ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಚಿತ್ರಜನವರಿಯಲ್ಲಿ ಸೆಟ್ಟೇರಲಿದೆ.

Advertisement

Udayavani is now on Telegram. Click here to join our channel and stay updated with the latest news.

Next