ಮುಂಬಯಿ: ಇಂಡಿಯಾ ಎಂಬ ಹೆಸರನ್ನು ‘ಭಾರತ್’ ಎಂದು ಬದಲಾಯಿಸುವ ಕುರಿತು ನಡೆಯುತ್ತಿರುವ ಭಾರೀ ಚರ್ಚೆಯ ನಡುವೆ, ಬಾಲಿವುಡ್ ನಟ ಅಕ್ಷಯ್ ಕುಮಾರ್ ತಮ್ಮ ಮುಂಬರುವ ಚಿತ್ರದ ಹೆಸರನ್ನು ‘ಮಿಷನ್ ರಾಣಿಗಂಜ್: ದಿ ಗ್ರೇಟ್ ಭಾರತ್ ರೆಸ್ಕ್ಯೂ’ ಎಂದು ಬದಲಾಯಿಸಿದ್ದಾರೆ.
ಇದಕ್ಕೂ ಮೊದಲು ‘ಮಿಷನ್ ರಾಣಿಗನ್: ದಿ ಗ್ರೇಟ್ ಇಂಡಿಯನ್ ರೆಸ್ಕ್ಯೂ’ ಎಂದು ಶೀರ್ಷಿಕೆ ನೀಡಲಾಗಿತ್ತು. ಮುಂಬರುವ ಚಿತ್ರದ ಫಸ್ಟ್ ಲುಕ್ ಪೋಸ್ಟರ್‌ನೊಂದಿಗೆ ನಿರ್ಮಾಪಕರು ‘ಭಾರತ್’ ಅನ್ನುವುದನ್ನು ಘೋಷಿಸಿದ್ದಾರೆ.
ಮುಂಬರುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಸರಕಾರವು ತಂದ ನಂತರ ಇಂಡಿಯಾ ಎಂಬ ಹೆಸರನ್ನು ಭಾರತ್ ಎಂದು ಬದಲಾಯಿಸುವ ಕುರಿತು ಆನ್‌ಲೈನ್ ಚರ್ಚೆಯ ನಡುವೆ, ಅಕ್ಷಯ್ ಕುಮಾರ್ ಅವರ ಚಿತ್ರದ ಹೆಸರನ್ನು ಬದಲಾಯಿಸಲಾಯಿಸಿರುವುದು ಭಾರಿ ಸುದ್ದಿಯಾಗಿದೆ.
ಈ ಚಿತ್ರವು “ರಾಣಿಗಂಜ್ ಕೋಲ್ ಫೀಲ್ಡ್” ನಲ್ಲಿ ನಡೆದ ನೈಜ ಘಟನೆಯಿಂದ ಪ್ರೇರಿತವಾಗಿದ್ದು, ಭಾರತದ ಕಲ್ಲಿದ್ದಲು ಗಣಿ ರಕ್ಷಣಾ ಕಾರ್ಯಾಚರಣೆಯನ್ನು ಮುನ್ನಡೆಸಿದ್ದ ದಿವಂಗತ ಜಸ್ವಂತ್ ಸಿಂಗ್ ಗಿಲ್ ಅವರ ವೀರತ್ವದಿಂದ ಸ್ಫೂರ್ತಿ ಪಡೆದಿದೆ. ವೀರ ಜಸ್ವಂತ್ ಸಿಂಗ್ ಗಿಲ್ ಅವರು ನವೆಂಬರ್ 1989 ರಲ್ಲಿ ರಾಣಿಗಂಜ್‌ನಲ್ಲಿ ಪ್ರವಾಹಕ್ಕೆ ಸಿಲುಕಿದ ಕಲ್ಲಿದ್ದಲು ಗಣಿಯಲ್ಲಿ ಸಿಕ್ಕಿಬಿದ್ದ ಬದುಕುಳಿದ ಎಲ್ಲಾ ಗಣಿಗಾರರನ್ನು ರಕ್ಷಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು, ಇದು ಭಾರತದ ಯಶಸ್ವಿ ರಕ್ಷಣಾ ಕಾರ್ಯಾಚರಣೆಗಳಲ್ಲಿ ಒಂದಾಗಿತ್ತು.
ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರೊಂದಿಗೆ ಪರಿಣಿತಿ ಚೋಪ್ರಾ, ಕುಮುದ್ ಮಿಶ್ರಾ, ಪವನ್ ಮಲ್ಹೋತ್ರಾ, ರವಿ ಕಿಶನ್, ವರುಣ್ ಬಡೋಲಾ, ದಿಬ್ಯೇಂದು ಭಟ್ಟಾಚಾರ್ಯ, ರಾಜೇಶ್ ಶರ್ಮಾ, ವೀರೇಂದ್ರ ಸಕ್ಸೇನಾ, ಶಿಶಿರ್ ಶರ್ಮಾ, ಅನಂತ್ ಮಹದೇವನ್, ಜಮೀಲ್ ಖಾನ್, ಸುಧೀರ್ ಪಾಂಡೆ, ಬಚನ್ ಪಚೇರಾ, ಮುಖೇಶ್ ಭಟ್, ಓಮಕರ್ ಭಟ್ ಮೊದಲಾದವರು ನಟಿಸಿದ್ದಾರೆ.
ಈ ಚಿತ್ರವು ರುಸ್ತಮ್ ನಂತರ ಟಿನು ಸುರೇಶ್ ದೇಸಾಯಿ ಅವರ ನಿರ್ದೇಶನದ ಥ್ರಿಲ್ಲರ್ ಚಿತ್ರವಾಗಿದೆ.