Advertisement

ಸೆ. 16ರಂದು ಪ್ರೈಮ್‌ನಲ್ಲಿ “ಬೆಲ್‌ ಬಾಟಮ್‌’ರಿಲೀಸ್‌

06:08 PM Sep 12, 2021 | Team Udayavani |

ಬಾಲಿವುಡ್‌ ನಟ ಅಕ್ಷಯ್‌ ಕುಮಾರ್‌ ಅವರ ಇತ್ತೀಚಿನ ಚಿತ್ರ “ಬೆಲ್‌ ಬಾಟಮ್‌’, ಸೆ. 16ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.

Advertisement

ಖುದ್ದು ಅಕ್ಷಯ್‌ ಕುಮಾರ್‌ ಅವರೇ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ದಿನಾಂಕ ನೆನಪಿಟ್ಟುಕೊಳ್ಳಿ. ನಮ್ಮ ಹೆಗ್ಗುರಿಯನ್ನು ನಿಮಗೆ ಈ ಮೂಲಕ ನೆನಪು ಮಾಡಿಕೊಡುತ್ತಿದ್ದೇವೆ. ಬೆಲ್‌ಬಾಟಮ್‌ ಚಿತ್ರ ಇದೇ ತಿಂಗಳ 16ರಂದು ಅಮೆಜಾನ್‌ ಪ್ರೈಮ್‌ನಲ್ಲಿ ನೋಡ ಸಿಗುತ್ತದೆ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಅಂದ ಹಾಗೆ, ಈ ಚಿತ್ರ ಆ. 19ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿತ್ತು. ರಂಜಿತ್‌ ಎಂ. ತಿವಾರಿ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್‌ ಜತೆಗೆ, ಲಾರಾ ದತ್ತಾ, ವಾಣಿ ಕಪೂರ್‌ ಹಾಗೂ ಹುಮಾ ಖುರೇಷಿ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ:ರಜೆ ಮತ್ತು ಕೆಲಸದ ದಿನಗಳ ನಡುವಿನ ವ್ಯತ್ಯಾಸವೇ ಅಂತ್ಯ: ಬಿಜೆಪಿ ವಿರುದ್ಧ ರಾಹುಲ್‌ ವಾಗ್ದಾಳಿ

Advertisement
Advertisement

Udayavani is now on Telegram. Click here to join our channel and stay updated with the latest news.

Next