Advertisement

Ayodhya: ಅಯೋಧ್ಯೆಯಲ್ಲಿ ಅಕ್ಷತೆ ಪೂಜೆ- ರಾಮಮಂದಿರದ ಪೂಜಾ ವಿಧಿವಿಧಾನಗಳು ಆರಂಭ

12:01 AM Nov 06, 2023 | Team Udayavani |

ಅಯೋಧ್ಯೆ: ಜನವರಿಯಲ್ಲಿ ಲೋಕಾರ್ಪಣೆಗೊಳ್ಳಲಿರುವ ಅಯೋಧ್ಯೆಯ ರಾಮ ಮಂದಿರದ ಪೂಜಾ ವಿಧಿವಿಧಾನಗಳು ಆರಂಭವಾಗಿವೆ. ರವಿವಾರ ಅಕ್ಷತೆ ಪೂಜೆಯೊಂದಿಗೆ ಧಾರ್ಮಿಕ ಆಚರಣೆಗಳಿಗೆ ಚಾಲನೆ ನೀಡಲಾಯಿತು.

Advertisement

ಮಂದಿರದ “ರಾಮ ದರ್ಬಾರ್‌’ನಲ್ಲಿ ಅಕ್ಷತೆ ಪೂಜೆಯನ್ನು ಕೈಗೊಳ್ಳಲಾಗಿದ್ದು, ಇದರ ಅಂಗವಾಗಿ ಒಂದು ನೂರು ಕ್ವಿಂಟಾಲ್‌ ಅಕ್ಕಿಗೆ ಅರಿಶಿನ ಮತ್ತು ದೇಸೀ ತುಪ್ಪವನ್ನು ಮಿಶ್ರಗೊಳಿಸಿ ತಯಾರಿಸಿದ ಅಕ್ಷತೆಯನ್ನು ಪೂಜಿಸಲಾಯಿತು ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ತಿಳಿಸಿದೆ.

ಪೂಜಿಸಿರುವ ಈ ಅಕ್ಷತೆಯನ್ನು ವಿಹಿಂಪದ  200 ಪ್ರತಿನಿಧಿಗಳಿಗೆ ಹಂಚಲಾಗುತ್ತದೆ. ಇವರು ಮುಂದಿನ ಜ. 22ರ ಒಳಗಾಗಿ ಈ ಅಕ್ಷತೆಯನ್ನು ದೇಶಾದ್ಯಂತ ಭಕ್ತರಿಗೆ ಹಂಚಲಿದ್ದಾರೆ ಎಂದು ಟ್ರಸ್ಟ್‌ ಮಾಹಿತಿ ನೀಡಿದೆ. ಇದರ ಜತೆಗೆ ಆಯಾ ಪ್ರಾದೇಶಿಕ ಭಾಷೆಗಳಲ್ಲಿ ಎರಡು ಕೋಟಿ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಕಳುಹಿಸಲಾಗುತ್ತದೆ ಎಂದು ಟ್ರಸ್ಟ್‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next