Advertisement

15 ವರ್ಷ ಬಳಿಕ ಅಕ್ಷರಧಾಮ ದಾಳಿ ಸಂಚುಕೋರನ ಸೆರೆ

06:00 AM Nov 05, 2017 | Harsha Rao |

ಅಹಮದಾಬಾದ್‌: ಗಾಂಧಿನಗರದ ಅಕ್ಷರಧಾಮ ದೇವಾಲಯದ ಮೇಲೆ 2002ರಲ್ಲಿ ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ ಅಬ್ದುಲ್‌ ರಶೀದ್‌ ಅಜೆ¾àರಿ ಬರೋಬ್ಬರಿ 15 ವರ್ಷಗಳ ಬಳಿಕ ಸೆರೆಸಿಕ್ಕಿದ್ದಾನೆ. ಶನಿವಾರ ರಿಯಾದ್‌ನಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕೂಡಲೇ ಆತನನ್ನು ಬಂಧಿಸಲಾಯಿತು ಎಂದು ಹಿರಿಯ ಪೊಲಿಸ್‌ ಅಧಿಕಾರಿಗಳು ತಿಳಿಸಿದ್ದಾರೆ.

Advertisement

2002ರಲ್ಲಿ ಅಕ್ಷರಧಾಮ ದೇವಾಲ ಯದ ಮೇಲೆ ನಡೆದ ದಾಳಿಯಲ್ಲಿ ಇವನ ಪಾತ್ರ ಪ್ರಮುಖವಾಗಿತ್ತು. ಈತ ದಾಳಿಗೆ ಸಂಚು ರೂಪಿಸಿದ್ದಲ್ಲದೆ, ಅದನ್ನು ಕಾರ್ಯ ಗತ ಗೊಳಿಸುವಲ್ಲಿ ಲಷ್ಕರ್‌ ಉಗ್ರ ಸಂಘಟನೆಗೆ ನೆರವಾಗಿದ್ದ. ಉಗ್ರ ಕೃತ್ಯ ನಡೆಯುವ ಮುನ್ನವೇ ರಿಯಾದ್‌ಗೆ ಪರಾರಿಯಾಗಿದ್ದ. ಶುಕ್ರವಾರ ರಾತ್ರಿ ಈತ ಸಹೋದರನನ್ನು ಭೇಟಿಯಾಗಲು ರಿಯಾದ್‌ನಿಂದ ಅಹಮದಾಬಾದ್‌ಗೆ ಬರುತ್ತಿದ್ದಾನೆ ಎಂಬ ಖಚಿತ ಮಾಹಿತಿಯ ಮೇರೆಗೆ ಅವನನ್ನು ಬಂಧಿಸಲಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ದಾಳಿಯಲ್ಲಿ 32 ಮಂದಿ ಮೃತಪಟ್ಟು, 80 ಮಂದಿ ಗಾಯಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next