Advertisement

ಮಗಳ ಮತಾಂತರಕ್ಕೆ ಕಮಲ್‌ ಹಾಸನ್‌ ಪ್ರತಿಕ್ರಿಯೆ ಏನು? 

11:34 AM Jul 29, 2017 | Team Udayavani |

ಹೊಸದಿಲ್ಲಿ: ಪ್ರತಿಭಾನ್ವಿತ ಯುವ ನಟಿ ಅಕ್ಷರಾ ಹಾಸನ್‌ ಅವರು ಬೌದ್ಧ ಧರ್ಮಕ್ಕೆ ಮತಾಂತರವಾಗಿ ಭಾರೀ ಸುದ್ದಿಯಾಗಿದ್ದಾರೆ. ಈ ಬಗ್ಗೆತಂದೆ ಕಮಲ ಹಾಸನ್‌ ಮಗಳೆ ಧರ್ಮ ಬದಲಾಯಿಸಿದ್ದೀಯ ? ನಿನ್ನನ್ನು ಪ್ರೀತಿಸುತ್ತೇನೆ ಎಂದು ಟ್ವೀಟ್‌ ಮಾಡಿದ್ದಾರೆ. 

Advertisement

”ಹಾಯ್‌ ಅಕ್ಷು..ನೀನು ಧರ್ಮ ಬದಲಾವಣೆ ಮಾಡಿದ್ದೀಯ ? ಲವ್‌ ಯೂ..ನೀನು ಕೂಡ ಪ್ರೀತಿಸುತ್ತಿ..ಧರ್ಮ ಮುಖ್ಯವಲ್ಲ,ಪ್ರೀತಿ ಮುಖ್ಯ. ಜೀವನವನ್ನುಖುಷಿಪಡು .ಲವ್‌ ಯುವರ್‌ ಬಾಪು ” ಎಂದು ಟ್ವೀಟ್‌ ಮಾಡಿದ್ದಾರೆ. 

ಇದಕ್ಕೆ ಅಕ್ಷರಾ ಪ್ರತಿಕ್ರಿಯಿಸಿದ್ದು ”ಹಾಯ್‌ ಬಾಪು ಜಿ ..ಇಲ್ಲ ನಾನಿನ್ನು ಮತಾಂತರಗೊಂಡಿಲ್ಲ. ಇನ್ನೂ ನಾನು ನಾಸ್ತಿಕಳಾಗಿ ಇದ್ದೇನೆ. ನಾನು ಬೌದ್ಧ ಧರ್ಮದ ಜೀವನ ವಿಧಾನವನ್ನು ವೈಯಕ್ತಿಕವಾಗಿ ಒಪ್ಪಿಕೊಳ್ಳುತ್ತೇನೆ” ಎಂದು ಪ್ರತಿಕ್ರಿಯೆ ನೀಡಿದ್ದಾರೆ. ತಂದೆ ಮಗಳ ಟ್ವಿಟ್‌ಗಳಿಗೆ ಅಭಿಮಾನಿಗಳು ಭಾರೀ ಸಂಖ್ಯೆಯಲ್ಲಿ ಪ್ರತಿಕ್ರಿಯೆಗಳನ್ನು ಬರೆದಿದ್ದಾರೆ.

ಅಕ್ಷರಾ ಸದ್ಯ ಥಾಲಾ ಅಜಿತ್‌ ರ ‘ವಿವೇಗಮ್‌’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next