Advertisement
ಕೆಂಚನಕೆರೆ ಶಾಲೆಯಲ್ಲಿ ಮುಖ್ಯ ಶಿಕ್ಷಕಿ ಹಾಗೂ ಸಹ ಶಿಕ್ಷಕಿ ಬಿಸಿಯೂಟ ತಯಾರು ಮಾಡಿ ಮಕ್ಕಳಿಗೆ ಊಟದ ವ್ಯವಸ್ಥೆಮಾಡಿದ್ದಾರೆ. ಊಟ ತಯಾರಿಸಲು ಕೆಲವು ಹೊತ್ತು ಬೇಕು, ಬಳಿಕ ಪಾತ್ರೆ ತೊಳೆದು ಸ್ವಚ್ಛ ಮಾಡಲು ಸಮಯ ತಗಲುವುದರಿಂದ ಪಾಠಕ್ಕೆ ಸಮಯ ಸಿಗುತ್ತಿಲ್ಲ ಎಂದು ಶಾಲಾ ಮುಖ್ಯ ಶಿಕ್ಷಕಿ ತಿಳಿಸಿದ್ದಾರೆ.
ಮೂಲ್ಕಿ: ನಾಲ್ಕು ದಿನಗಳಿಂದ ರಾಜ್ಯ ವ್ಯಾಪಿ ನಡೆಯುತ್ತಿರುವ ಅಕ್ಷರ ದಾಸೋಹ ಕಾರ್ಯಕರ್ತರ ಮುಷ್ಕರದ ಹಿನ್ನೆಲೆಯಲ್ಲಿ ಮೂಲ್ಕಿ ನಗರ ಪಂಚಾಯತ್, ಕಿಲ್ಪಾಡಿ ಮತ್ತು ಅತಿಕಾರಿ ಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲ ಸಿಬಂದಿ ನಾಲ್ಕು ದಿನಗಳಿಂದ ಕೆಲಸಕ್ಕೆ ಗೈರು ಹಾಜರಾಗಿ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ.
Related Articles
Advertisement
ಅಕ್ಷರದಾಸೋಹ ಯೋಜನೆಯಡಿ ಮಕ್ಕಳಿಗೆ ಅಡುಗೆ ಮಾಡುತ್ತಿರುವ ಸಿಬಂದಿ ಹಾಗೂ ಸಹಾಯಕಿ ಅವರ ಸಂಘಟನೆಯ ಕರೆಯಂತೆ ಅಡುಗೆ ಕೆಲಸವನ್ನು ನಿರ್ವಹಿಸದೇ ಗೈರುಹಾಜರಿಯಾಗಿದ್ದಾರೆ ಎಂದು ಶಾಲೆಯ ಮುಖ್ಯಸ್ಥರು ತಿಳಿಸಿದ್ದಾರೆ.
ಇನ್ನೆಷ್ಟು ದಿನ ಈ ಕೆಲಸ ಮುಂದುವರಿಯಬಹುದು ಎಂದು ಯಾವುದೇ ಸೂಕ್ತವಾದ ಮಾಹಿತಿ ಇಲ್ಲ. ಆದರೆ ಸರಕಾರದ ಆದೇಶದಡಿ ತಮ್ಮ ಮಕ್ಕಳಿಗೆ ಅಡುಗೆ ಮಾಡುವ ಕೆಲಸದಲ್ಲಿ ಯಾವುದೇ ರೀತಿಯ ಉದಾಸೀನತೆ ನಮಗಿಲ್ಲ ಎಂದು ಹೆತ್ತವರೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಉಳ್ಳಾಲ: ವೇತನ ಹೆಚ್ಚಳಕ್ಕೆ ಆಗ್ರಹಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಕಾರ್ಯಕರ್ತೆಯರ ಪ್ರತಿಭಟನೆಗೆ ಉಳ್ಳಾಲಾದ್ಯಂತ ಶಾಲೆಗಳಲ್ಲಿ ಕೆಲವೆಡೆ ಶಾಲಾ ಶಿಕ್ಷಕರು ಬಿಸಿಯೂಟ ತಯಾರಿಸಿದರೆ, ಕೆಲವೆಡೆ ಶಿಕ್ಷಕರೊಂದಿಗೆ ಹೆತ್ತವರು ಸಹಕರಿಸಿದರು.
ಮಂಗಳೂರು ದಕ್ಷಿಣ ವಲಯಕ್ಕೆ ಸೇರಿರುವ ಉಳ್ಳಾಲ, ತಲಪಾಡಿ, ತೊಕ್ಕೊಟ್ಟು, ಮಂಜನಾಡಿ, ಹರೇಕಳ, ಪಾವೂರು,ಕೊಣಾಜೆ, ಕೋಟೆಕಾರು ಸೇರಿದಂತೆ ಬಂಟ್ವಾಳ ತಾಲೂಕಿನ ಕೆಲವು ಶಾಲೆಗಳಲ್ಲಿ ಬಿಸಿಯೂಟ ತಯಾರಕರು ಕಳೆದರೆಡು ದಿನಗಳಿಂದ ಗೈರುಹಾಜರಾಗಿದ್ದರು. ನಿನ್ನೆಯೂ ಶಿಕ್ಷಕರೊಂದಿಗೆ ಹೆತ್ತವರು ಸಹಕರಿಸಿದರೆ, ಶುಕ್ರವಾರವೂ ಬಿಸಿಯೂಟಕ್ಕೆ ಸಹಕರಿಸಿದರು. ಕೆಲವು ಖಾಸಗಿ ಅನುದಾನಿತ ಶಾಲೆಗಳಲ್ಲಿ ಬಿಸಿಯೂಟ ತಯಾರಕರು ಆಗಮಿಸಿದ್ದರೆ, ಸರಕಾರಿ ಶಾಲೆಗಳ ಬಿಸಿಯೂಟ ತಯಾರಕರು ಗೈರು ಹಾಜರಾಗಿದ್ದರು. ಶಿಕ್ಷಕರು ಊಟ ತಾಯರಿಸುವುದು ಅನಿವಾರ್ಯವಾಗಿದ್ದರಿಂದ ಪಾಠಕ್ಕೆ ತೊಂದರೆಯಾಯಿತು ಎಂದ ಶಿಕ್ಷಕರೊಬ್ಬರು ತಿಳಿಸಿದರು. ಕಿಚಡಿ, ಪಲಾವ್
ಕೆಲವು ಶಾಲೆಗಳಲ್ಲಿ ಗುರುವಾರ ಕಿಚಡಿ, ಪಲಾವ್ ಮಾಡಿ ಪದಾರ್ಥಗಳಿಂದ ಮುಕ್ತಿ ಪಡೆದರೆ, ಕೆಲವು ಶಾಲೆಗಳಲ್ಲಿ ಗಂಜಿ
ಚಟ್ನಿಯನ್ನು ನೀಡುವ ಮೂಲಕ ಶಿಕ್ಷಕರು ಹೊರೆಯನ್ನು ಕಡಿಮೆ ಮಾಡಿದರು. ಕೆಲವೆಡೆ ಶಿಕ್ಷಕಿಯರೊಂದಿಗೆ ಶಿಕ್ಷಕರೂ ಬಿಸಿಯೂಟ ತಯಾರಿಕೆಗೆ ಸಹಕರಿಸಿದರು. ವ್ಯತ್ಯಯವಾಗಿಲ್ಲ
ಸುರತ್ಕಲ್: ಬಿಸಿಯೂಟ ನೌಕರರ ಮುಷ್ಕರ ಸುರತ್ಕಲ್ ಪರಿಸರದಲ್ಲಿ ಶುಕ್ರವಾರದಿಂದ ಆರಂಭಗೊಂಡಿದೆ. ಇಲ್ಲಿನ ಬಹುತೇಕ ಶಾಲೆಗೆ ಇಸ್ಕಾನ್ ಅಕ್ಷಯಪಾತ್ರೆ ಅನ್ನದಾಸೋಹದ ಜವಾಬ್ದಾರಿ ವಹಿಸಿಕೊಂಡಿದ್ದು, ಹೆಚ್ಚಿನ ವ್ಯತ್ಯಯ ಉಂಟಾಗಿಲ್ಲ. ಉಳಿದಂತೆ ಸುರತ್ಕಲ್ ವಿದ್ಯಾದಾಯಿನಿ, ಕುಳಾಯಿ ವೆಂಕಟ್ರಮಣ ಸಹಿತ ವಿವಿಧ ಶಾಲೆಗಳಲ್ಲಿ ಎಸ್‌ಡಿಎಂಸಿ ಸಹಕಾರದೊಂದಿಗೆ ತಾಯಂದಿರ ಸಮಿತಿ ವತಿಯಿಂದ ಆಹಾರ ತಯಾರಿಸಿ, ವಿದ್ಯಾರ್ಥಿಗಳಿಗೆ
ಉಣಬಡಿಸಲಾಯಿತು. ವಿದ್ಯಾರ್ಥಿಗಳಿಗೆ ಅನ್ನ ಬಡಿಸಲು ಶಿಕ್ಷಕರ ಸಹಿತ ಹೆತ್ತವರು ಸಹಕರಿಸಿದರು. ಕೇಟರರ್‌ಊಟ
ಬಜಪೆ: ಎಕ್ಕಾರು ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹೆತ್ತವರ ಜತೆ ಶಿಕ್ಷಕರು ಸೇರಿ ಬಿಸಿಯೂಟ ತಯಾರಿಸಿದ್ದಾರೆ. ಕೆಂಜಾರು ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಎಸ್‌ಡಿಎಂಸಿ ಸದಸ್ಯರಿಂದ ಬಿಸಿಯೂಟ ತಯಾರಿಸಲಾಯಿತು. ಮುಚ್ಚಾರು ಮತ್ತು ಕೊಂಪದವಿನಲ್ಲಿ ಶಾಲಾ ಮಕ್ಕಳು ಮನೆಯಿಂದ ಬುತ್ತಿ ತಂದಿದ್ದರು. ಕಿನ್ನಿಕಂಬಳ ಸರಕಾರಿ ಶಾಲೆಯಲ್ಲಿ ಮಂಗಳೂರಿನಿಂದ ಕೇಟರರ್ನಿಂದ ಊಟ ತರಿಸಲಾಯಿತು. ಮುತ್ತೂರು ಹಾಗೂ ಕುಳವೂರು ಸರಕಾರಿ ಶಾಲೆಯಲ್ಲಿ ಹೆತ್ತವರು ಅಡುಗೆ ಮಾಡಿದರು.