Advertisement

ಅಕ್ಕಮಹಾದೇವಿ ವಿವಿ 12ನೇ ಘಟಿಕೋತ್ಸವ: ಸಾಧಕಿಯರಿಗೆ ಗೌರವ ಡಾಕ್ಟರೇಟ್ ಪ್ರದಾನ

11:26 AM Nov 09, 2021 | Team Udayavani |

ವಿಜಯಪುರ: ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಮೂವರು ಸಾಧಕಿಯರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಂಗಳವಾರ ಮಾಡಲಾಯಿತು.

Advertisement

ಘಟಿಕೋತ್ಸವದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳೂ ಆಗಿರುವ ರಾಜ್ಯಪಾಲ ಥಾವರಚಂದ್ ಗೆಹ್ಲೋಥ್ ಗೌರವ ಡಾಕ್ಟರೇಟ್ ಹಾಗೂ ಇತರೆ ಪದವಿಗಳ ಪ್ರದಾನ ಮಾಡಿದರು.

ಸಾಹಿತ್ಯ ಕ್ಷೇತ್ರದಲ್ಲಿ ವೈದೇಹಿ ಕಾವ್ಯನಾಮ ಖ್ಯಾತಿಯ ಜಾನಕಿ ಶ್ರೀನಿವಾಸಮೂರ್ತಿ, ಸಂಗೀತ ಕ್ಷೇತ್ರದ ಸಾಧಕಿ ಡಾ.ಸುಮಾ ಸುಧೀಂದ್ರ ಹಾಗೂ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿರುವ ಯಶಸ್ವಿ ಮಹಿಳಾ ಉದ್ಯಮಿ ಕಲ್ಪನಾ ಸರೋಜ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದರು.

ಇನ್ಫೋಸಿಸ್‍ನ ಸುಧಾಮೂರ್ತಿ ಅವರು ಆನ್‍ಲೈನ್ ಘಟಿಕೋತ್ಸವ ಭಾಷಣ ಮಾಡಿದರು. ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್, ಚಿನ್ನದ ಪದಕ ವಿಜೇತರಿಗೆ ಹಾಗೂ ಪಿಎಚ್‍ಡಿ ಪದವಿಧರರಿಗೆ ಮಾತ್ರ ನೇರವಾಗಿ ಪದವಿ ಪ್ರದಾನ ಮಾಡಲಾಯಿತು. ಉಳಿದ ಎಲ್ಲ ಪದವೀಧರರಿಗೆ ಆನ್‍ಲೈನ್ ಮೂಲಕ ಪದವಿ ಪ್ರದಾನ ಮಾಡಲಾಯಿತು.

ಇದನ್ನೂ ಓದಿ: ಕೋವಿಡ್ ನಿಯಂತ್ರಣ ಮಾಡಿದ್ದೇ ಸರಕಾರದ ದೊಡ್ಡ ಸಾಧನೆ: ಸಚಿವ ಬಿ.ಸಿ. ಪಾಟೀಲ್

Advertisement

ವಿವಿಧ ಸ್ನಾತಕ, ಸ್ನಾತಕೋತ್ತರ ಕೋರ್ಸ್‍ಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 76 ವಿದ್ಯಾಥಿನಿಯರಿಗೆ ಚಿನ್ನದ ಪದಕ ಸಹಿತ ಪದವಿ ಪ್ರದಾನ ಮಾಡಲಾಗುತ್ತದೆ. 65 ವಿದ್ಯಾರ್ಥಿನಿಯರಿಗೆ 76 ಚಿನ್ನದ ಪದಕ ಸಹಿತ ಪದವಿ ಪ್ರದಾನ ಮಾಡಲಾಯಿತು.

ಘಟಿಕೋತ್ಸವದಲ್ಲಿ 996 ವಿದ್ಯಾರ್ಥಿನಿಯರಿಗೆ ವಿವಿಧ ವಿಷಯಗಳ ಸ್ನಾತಕೋತ್ತರ, 89 ವಿದ್ಯಾರ್ಥಿನಿಯರಿಗೆ ವಿವಿಧ ವಿಷಯಗಳ ಡಿಪ್ಲೋಮಾ ಪದವಿ, 10,123 ವಿದ್ಯಾರ್ಥಿನಿಯರಿಗೆ ಸ್ನಾತಕ ಸೇರಿದಂತೆ 11,208 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಗುತ್ತದೆ. 48 ವಿದ್ಯಾರ್ಥಿನಿಯರಿಗೆ ಪದವಿ ಪ್ರದಾನ ಮಾಡಲಾಯಿತು.

ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಕುಲಸಚಿವೆ, ಸುನಂದಮ್ಮ, ಮೌಲ್ಯಮಾಪನ ಕುಲಸಚಿವ ಕೆ.ರಮೇಶ ಸೇರಿದಂತೆ ವಿವಿಧ ಗಣ್ಯರು ಘಟಿಕೋತ್ಸವ ವೇದಿಕೆ ಮೇಲೆ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next