Advertisement

ಅಖೀಲೇಶ್‌ಗೆ ತಡೆ ಒಡ್ಡಿದ ಅಧಿಕಾರಿಗಳು: ಎಸ್‌ಪಿ- ಬಿಜೆಪಿ ಕೆಸರೆರಚಾಟ

12:30 AM Feb 13, 2019 | Team Udayavani |

ಲಕ್ನೋ: ಸಮಾಜವಾದಿ ಪಕ್ಷದ ಅಧ್ಯಕ್ಷ ಅಖೀಲೇಶ್‌ ಯಾದವ್‌ರನ್ನು ವಿಮಾನ ಮೂಲಕ ಅಲಹಾಬಾದ್‌ಗೆ ತೆರಳದಂತೆ ಪೊಲೀಸರು ತಡೆದಿದ್ದು, ಈ ವಿಚಾರ ಉತ್ತರ ಪ್ರದೇಶದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಈ ಬಗ್ಗೆ ಅಖೀಲೇಶ್‌ ಯಾದವ್‌ ಫೋಟೋಗಳನ್ನು ಟ್ವೀಟ್‌ ಮಾಡಿ, ತಮ್ಮನ್ನು “ವಶಪಡಿಸಿಕೊಳ್ಳಲಾಗಿದೆ’ ಎಂದು ಬರೆದುಕೊಂಡಿದ್ದಾರೆ.

Advertisement

ಅಲಹಾಬಾದ್‌ನಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿ ಘಟಕದ ನಾಯಕನ ಪದಗ್ರಹಣ ಕಾರ್ಯಕ್ರಮಕ್ಕೆ ತೆರಳಲು ಅಖೀಲೇಶ್‌ ಲಕ್ನೋ ಏರ್‌ಪೋರ್ಟ್‌ನಿಂದ ತೆರಳಲು ಚಾರ್ಟರ್ಡ್‌ ವಿಮಾನ ಏರಲು ಮುಂದಾದರು. ಈ ಸಂದರ್ಭದಲ್ಲಿ ಮಾಜಿ ಸಿಎಂರನ್ನು ಪೊಲೀಸ್‌ ಅಧಿಕಾರಿಗಳು ತಡೆದರು ಎಂದು ಅಖೀಲೇಶ್‌ ಹೇಳಿಕೊಂಡಿದ್ದಾರೆ. ವಿದ್ಯಾರ್ಥಿಗಳ ಶಕ್ತಿ ಏನು ಎನ್ನುವುದನ್ನು ತಿಳಿದು ಬಿಜೆಪಿಗೆ ಭಯವಾಗಿದೆ ಎಂದೂ ಆರೋಪಿಸಿದ್ದಾರೆ. ಈ ವಿಚಾರ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಜತೆಗೆ ರಾಜ್ಯಾದ್ಯಂತ ಪ್ರತಿಭಟನೆಯೂ ನಡೆದಿದೆ. ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಯೋಗಿ ಆದಿತ್ಯನಾಥ್‌, ಅವರ ಭೇಟಿಯಿಂದ ಗಲಾಟೆ ಉಂಟಾಗಬಹುದು. ಪ್ರಯಾಗ್‌ರಾಜ್‌ನಲ್ಲೀಗ ಕುಂಭ ಮೇಳ ಶಾಂತಿಯುತವಾಗಿ ನಡೆಯುತ್ತಿದೆ. ಹೀಗಾಗಿ ಪ್ರಯಾಣಕ್ಕೆ ತಡೆಯೊಡ್ಡಲಾಯಿತು ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next