ಲಕ್ನೋ: ತಮ್ಮನ್ನು ಬಾಬಾ ಮುಖ್ಯಮಂತ್ರಿ ಎಂದು ಟೀಕಿಸಿರುವ ಉತ್ತರಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ಸೋಮವಾರ (ಫೆ.21) ತೀಕ್ಷ್ಣ ವಾಗ್ದಾಳಿ ನಡೆಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಅಖಿಲೇಶ್ ಜೀವಮಾನವಿಡೀ ಚಿಕ್ಕ ಬಾಲಕನಾಗಿಯೇ ಇರಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ಶಿವಮೊಗ್ಗ ಉದ್ವಿಗ್ನ: ಹರ್ಷ ಶವಯಾತ್ರೆ ವೇಳೆ ಹಿಂಸಾಚಾರ; ವಾಹನಗಳಿಗೆ ಬೆಂಕಿ
ಪಿಟಿಐ ನ್ಯೂಸ್ ಏಜೆನ್ಸಿಗೆ ಯೋಗಿ ಆದಿತ್ಯನಾಥ್ ನೀಡಿರುವ ಸಂದರ್ಶನದಲ್ಲಿ, ಸರ್ಕಾರದ ಯೋಜನೆಗಳನ್ನು ನಿರ್ವಹಿಸಲು ಇ-ಡ್ಯಾಶ್ ಬೋರ್ಡ್ ಅನ್ನು ಬಳಸುವ ಬಗ್ಗೆ ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಗೆ ತಿಳಿದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
2017ರಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಭಾರತೀಯ ಜನತಾ ಪಕ್ಷ ಲ್ಯಾಪ್ ಟಾಪ್ ಮತ್ತು ಟ್ಯಾಬ್ಲೆಟ್ಸ್ ವಿತರಿಸುವುದಾಗಿ ತಿಳಿಸಿತ್ತು. ಆದರೆ ಯೋಗಿ ಆದಿತ್ಯನಾಥ್ ಅವರಿಂದಾಗಿ ಅದು ವಿಳಂಬವಾಗಿತ್ತು. ಯಾಕೆಂದರೆ ಬಾಬಾ ಮುಖ್ಯಮಂತ್ರಿಗೆ ಅದನ್ನು ಉಪಯೋಗಿಸುವುದು ಹೇಗೆ ಎಂಬುದು ತಿಳಿದಿಲ್ಲ ಎಂಬುದಾಗಿ ಅಖಿಲೇಶ್ ಇತ್ತೀಚೆಗೆ ಆರೋಪಿಸಿದ್ದರು.
ಇದೊಂದು ಬಾಲಿಶ ಹೇಳಿಕೆ ಎಂದು ಪ್ರತಿಕ್ರಿಯಿಸಿರುವ ಯೋಗಿ ಆದಿತ್ಯನಾಥ್, ಅಖಿಲೇಶ್ ಯಾದವ್ ಜೀವಮಾನವಿಡೀ ಬಬುವಾ (ಚಿಕ್ಕ ಹುಡುಗ) ಆಗಿ ಉಳಿಯಲಿದ್ದಾರೆ. ಇಂತಹ ಹೇಳಿಕೆಗಳು ಸಂಸ್ಕಾರ ಮತ್ತು ಮೌಲ್ಯಗಳನ್ನು ಒಡೆದಂತೆ ಎಂಬುದಾಗಿ ತಿಳಿಸಿದ್ದಾರೆ.
ಸಮಾಜವಾದಿ ಪಕ್ಷದ ಸ್ಥಾಪಕ, ತಂದೆ ಮುಲಾಯಂ ಸಿಂಗ್ ಯಾದವ್ ಅವರು ಅಖಿಲೇಶ್ ಗೆ ಪ್ರೀತಿಯಿಂದ ಕರೆಯುವ ಹೆಸರು ಬಬುವಾ. ಇದೀಗ ಯೋಗಿ ಆದಿತ್ಯನಾಥ್ ಅದೇ ಹೆಸರಿನಿಂದ ತಿರುಗೇಟು ನೀಡಿರುವುದಾಗಿ ವರದಿ ತಿಳಿಸಿದೆ.