ನವದೆಹಲಿ: ಹೆಲಿಕಾಪ್ಟರ್ ಮೂಲಕ ಮುಜಾಫರ್ ನಗರಕ್ಕೆ ತೆರಳಲು ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷದ ವರಿಷ್ಠ ಅಖಿಲೇಶ್ ಯಾದವ್, ಈ ಘಟನೆಯ ಹಿಂದೆ ಭಾರತೀಯ ಜನತಾ ಪಕ್ಷದ ಸಂಚು ಇರುವುದಾಗಿ ಆರೋಪಿಸಿದ್ದಾರೆ.
ಇದನ್ನೂ ಓದಿ:ಮೊಮ್ಮಗಳ ಆತ್ಮಹತ್ಯೆ : ಮೌನಕ್ಕೆ ಶರಣಾದ ಬಿಎಸ್ ವೈ; ಪ್ರಧಾನಿ, ಗಣ್ಯರಿಂದ ಸಾಂತ್ವನ
“ದೆಹಲಿಯಲ್ಲಿ ನಮ್ಮ ಹೆಲಿಕಾಪ್ಟರ್ ಗೆ ತಡೆಯೊಡ್ಡಿದ್ದು, ಮುಜಾಫರ್ ನಗರಕ್ಕೆ ತೆರಳಲು ಅನುಮತಿ ನೀಡುತ್ತಿಲ್ಲ.ಈವರೆಗೂ ನನಗೆ ಯಾವ ಕಾರಣಕ್ಕೆ ತೆರಳಲು ಅವಕಾಶ ನೀಡುತ್ತಿಲ್ಲ ಎಂಬುದನ್ನು ತಿಳಿಸಿಲ್ಲ. ಇದರ ಹಿಂದೆ ಬಿಜೆಪಿ ಪ್ರಭಾವಶಾಲಿ ಮುಖಂಡರ ಕೈವಾಡ ಇದ್ದಿರುವುದಾಗಿ ಅಖಿಲೇಶ್ ಯಾದವ್ ಟ್ವೀಟರ್ ನಲ್ಲಿ ದೂರಿದ್ದಾರೆ.
ಉತ್ತರಪ್ರದೇಶ ವಿಧಾನಸಭೆ ಚುನಾವಣೆ ನಡೆಯಲಿರುವ ಸಂದರ್ಭದಲ್ಲಿ ಅಖಿಲೇಶ್ ಯಾದವ್ ಈ ಆರೋಪ ಮಾಡಿದ್ದು, ಅಖಿಲೇಶ್ ಯಾದವ್ ಮೈನ್ ಪುರಿ ಜಿಲ್ಲೆಯ ಕರ್ಹಾಲ್ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಫೆಬ್ರುವರಿ 20ರಂದು ಕರ್ಹಾಲ್ ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆಯಲಿದ್ದು, ಒಟ್ಟು ಏಳು ಹಂತಗಳಲ್ಲಿ ಉತ್ತರಪ್ರದೇಶ ವಿಧಾನಸಭಾ ಚುನಾವಣೆ ನಡೆಯಲಿದೆ. ಮಾರ್ಚ್ 10ರಂದು ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಬಹಿರಂಗವಾಗಲಿದೆ.