ಲಕ್ನೋ:ಸಮಾಜವಾದಿ ಪಕ್ಷದ ರಾಲಿಯಲ್ಲಿ ಪಾಕಿಸ್ತಾನದ ಪಿತಾಮಹಾ ಮಹಮ್ಮದ್ ಅಲಿ ಜಿನ್ನಾ ಅವರನ್ನು ಹುತಾತ್ಮರನ್ನಾಗಿಸುವ ಮೂಲಕ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ವಿವಾದಕ್ಕೆ ಸಿಲುಕಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಅಭಿವೃದ್ಧಿ ಹಿಂದೆ ಜನ ಸುತ್ತುವುದಲ್ಲ, ಜನರ ಸುತ್ತಲೂ ಅಭಿವೃದ್ಧಿ ಇರಬೇಕು: ಸಿಎಂ ಬೊಮ್ಮಾಯಿ
ಸರ್ದಾರ್ ವಲ್ಲಭ್ ಭಾಯಿ ಪಟೇಲ್, ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು, ಜಿನ್ನಾ ಸೇರಿದಂತೆ ಬಹುತೇಕರು ಒಂದೇ ಸಂಸ್ಥೆಯಿಂದ ಹೊರಬಂದವರು. ಅವರೆಲ್ಲಾ ಒಂದೇ ಶಿಕ್ಷಣ ಸಂಸ್ಥೆಯಲ್ಲಿ ಓದಿ, ಮುಂದೆ ಬ್ಯಾರಿಸ್ಟರ್ ಗಳಾದರೂ ಮತ್ತು ಸ್ವಾತಂತ್ರ್ಯ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದರು. ಜಿನ್ನಾ ಭಾರತದ ಸ್ವಾತಂತ್ರ್ಯ ಚಳವಳಿಯ ಹೀರೋ ಎಂದು ಅಖಿಲೇಶ್ ಹೇಳಿದರು.
ಸರ್ದಾರ್ ಪಟೇಲ್ ಅವರ ಜನ್ಮ ದಿನಾಚರಣೆಯನ್ನು ಸ್ಮರಿಸಿಕೊಂಡ ಅಖಿಲೇಶ್ ಯಾದವ್, ಪಟೇಲ್ ಅವರಿಗೆ ದೇಶದ ಭೂಮಿಯನ್ನು ಹೇಗೆ ಬಳಸಿಕೊಳ್ಳಬೇಕೆಂದು ತಿಳಿದಿತ್ತು. ಅದರಂತೆ ದೃಢ ನಿರ್ಧಾರ ತೆಗೆದುಕೊಳ್ಳುವ ಮೂಲಕ ಸರ್ದಾರ್ ಭಾರತದ ಉಕ್ಕಿನ ಮನುಷ್ಯ ಎಂದು ಜನಜನಿತರಾಗಿದ್ದಾರೆ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷಕ್ಕೂ ಮತ್ತು ಕಾಂಗ್ರೆಸ್ ಗೂ ಏನೂ ವ್ಯತ್ಯಾಸ ಇಲ್ಲ ಎಂದು ಆರೋಪಿಸಿದ ಅಖಿಲೇಶ್ ಯಾದವ್, ತನಿಖಾ ಸಂಸ್ಥೆಗಳಾದ ಇ.ಡಿ ಮತ್ತು ಸಿಬಿಐ ಅನ್ನು ವಿಪಕ್ಷಗಳ ವಿರುದ್ಧ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.