Advertisement

ಅಖೀಲೇಶ್‌ಗೆ ಡಿಪ್ರಶನ್‌: ಉತ್ತರ ಪ್ರದೇಶ ಡಿಸಿಎಂ ಮೌರ್ಯ ಟೀಕೆ

04:10 PM Sep 22, 2017 | Team Udayavani |

ಹೊಸದಿಲ್ಲಿ : ”ಹಲವು ಬಿಜೆಪಿ ನಾಯಕರು ಡೇರಾ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌ ಜತೆಗಿರುವ ಫೋಟೋಗಳು ಬಹಿರಂಗವಾಗಿವೆ; ವಿವಾದಿತ ದೇವಮಾನವನೊಂದಿಗೆ ಬಿಜೆಪಿ ನಾಯಕರು ನಂಟು ಹೊಂದಿರುವುದು ಇದರಿಂದ ಸ್ಪಷ್ಟವಾಗಿದೆ” ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖೀಲೇಶ್‌ ಯಾದವ್‌ ಹೇಳಿದ ಒಂದು ದಿನ ತರುವಾಯ ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಉ.ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್‌ ಮೌರ್ಯ ಅವರು  “ಅಖೀಲೇಶ್‌ ಮಾನಸಿಕ ಕ್ಷೋಭೆಯಿಂದ ಬಳಲುತ್ತಿದ್ದಾರೆ’ ಎಂದು ಹೇಳಿದ್ದಾರೆ. 

Advertisement

ರಾಜ್ಯದಲ್ಲಿನ ಬಿಜೆಪಿ ಸರಕಾರ ಅಸಮಾನ ಅಭಿವೃದ್ದಿಯನ್ನು ಕೈಗೊಂಡಿದೆ ಎಂದು ದೂರಿರುವ ಅಖೀಲೇಶ್‌ ಗೆ ಉತ್ತರವಾಗಿ ಮೌರ್ಯ ಅವರು, “ಬಿಜೆಪಿ ಇಂತಹ ತಾರತಮ್ಯಗಳಲ್ಲಿ ನಂಬಿಕೆ ಇಟ್ಟಿಲ್ಲ; ಯೋಗಿ ಆದಿತ್ಯನಾಥ್‌ ಸರಕಾರ ರಾಜ್ಯದ ಏಕಪ್ರಕಾರದ ಅಭಿವೃದ್ಧಿಗೆ ಶ್ರಮಿಸುತ್ತಿದೆ’ ಎಂದು ಹೇಳಿದರು. 

ರಾಜ್ಯದಲ್ಲಿನ ಯೋಗಿ ಆದಿತ್ಯನಾಥ್‌ ಸರಕಾರವನ್ನು ಪ್ರಶಂಸಿಸಿದ ಮೌರ್ಯ ಅವರು, ಬಿಜೆಪಿ ತನ್ನ ಮೊದಲ ಆರು ತಿಂಗಳ ಆಡಳಿತೆಯಲ್ಲಿ ಉತ್ತರ ಪ್ರದೇಶದಲ್ಲಿ ವಿಐಪಿ ಸಂಸ್ಕೃತಿ ಅಸ್ತಿತ್ವದಲ್ಲಿ ಇಲ್ಲ ಎಂಬುದನ್ನು ತೋರಿಸಿಕೊಟ್ಟಿದೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next