Advertisement

ವೃತ್ತಿಪರ ಬಾಕ್ಸಿಂಗ್‌ ಪ್ರವೇಶಿಸಿದ ಅಖೀಲ್‌, ಜಿತೇಂದ್ರ

03:45 AM Feb 19, 2017 | Team Udayavani |

ಹೊಸದಿಲ್ಲಿ: ಕಾಮನ್ವೆಲ್ತ್‌ ಗೇಮ್ಸ್‌ ಚಿನ್ನದ ಪದಕ ವಿಜೇತ ಬಾಕ್ಸರ್‌ ಅಖೀಲ್‌ ಕುಮಾರ್‌, ಒಲಿಂಪಿಯನ್‌ ಜಿತೇಂದ್ರ ಕುಮಾರ್‌ ಈಗ ವೃತ್ತಿಪರ ಬಾಕ್ಸಿಂಗ್‌ಗೆ ಇಳಿದಿದ್ದಾರೆ. 

Advertisement

ವೃತ್ತಿಪರ ಬಾಕ್ಸಿಂಗ್‌ ಸಂಸ್ಥೆಯಾದ ಐಒಎಸ್‌ನೊಂದಿಗೆ ಬಹು ವರ್ಷದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಸ್ವತಃ ಈ ವಿಷಯವನ್ನು ಇವರಿಬ್ಬರು ಮಾಧ್ಯಮಗಳಿಗೆ ಖಚಿತಪಡಿಸಿದ್ದಾರೆ. ವಿಜೇಂದರ್‌ ಸಿಂಗ್‌ ಪ್ರೊ ಬಾಕ್ಸಿಂಗ್‌ ಆಡಲು ಸಹಿ ಹಾಕಿದ ಬಳಿಕ ಹಲವಾರು ಬಾಕ್ಸರ್‌ಗಳು ವೃತ್ತಿಪರ ಬಾಕ್ಸಿಂಗ್‌ನಲ್ಲಿ ಆಡಲು ಸಹಿ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದು. ವಿಶೇಷವೆಂದರೆ ವಿಜೇಂದರ್‌ ಪ್ರೊ ಬಾಕ್ಸಿಂಗ್‌ ನಿರ್ವಹಣೆ ನಡೆಸುತ್ತಿರುವ ಐಒಎಸ್‌ಗೆ ಇವರಿಬ್ಬರು ಸಹಿ ಹಾಕಿದ್ದಾರೆ. ಎಲ್ಲವು ಅಂದುಕೊಂಡಂತೆ ನಡೆದರೆ ಮುಂಬಯಿಯಲ್ಲಿ ನಡೆಯಲಿರುವ ವೃತ್ತಿಪರ ಬಾಕ್ಸಿಂಗ್‌ನಲ್ಲಿ ಅಖೀಲ್‌, ಜಿತೇಂದ್ರ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next