ದೇವನಹಳ್ಳಿ: ಕಡಿಮೆ ಹೊಗೆ ಹೊರಸೂಸುವ, ದೇಶದಲ್ಲೇ ಮೊದಲ ಪರಿಸರ ಸ್ನೇಹಿ ಬೋಯಿಂಗ್ ಹೊಂದಿರುವ 20ನೇ ವಿಮಾನವನ್ನು ಆಕಾಸ ಏರ್‌ಲೈನ್ ಪರಿಚಯಿಸಿದೆ.
ಪರಿಸರ ಸ್ನೇಹಿ ಬೋಯಿಂಗ್ ಆದ 737 Mಅಗಿ , 737-8-200 ವಿಮಾನವು ಮಂಗಳವಾರ ಬೆಳಗ್ಗೆ 9.31ಕ್ಕೆ ಬೆಂಗಳೂರಿಗೆ ಆಗಮಿಸಿತು. ಈ ನೂತನ ವಿಮಾನವನ್ನು ಯುಎಸ್‌ಎನ ಸಿಯಾಟಾಲ್‌ನಿಂದ ಹೊರಟು ಮಂಗಳವಾರ ಬೆಂಗಳೂರಿಗೆ ಬಂದು ತಲುಪಿದೆ.
ಕಳೆದ ವರ್ಷದ ತನ್ನ ವಿಮಾನಯಾನವನ್ನು ಪ್ರಾರಂಭಿಸಿದ ಆಕಾಸ ವಿಮಾನ ಸಂಸ್ಥೆಯು ಒಂದು ವರ್ಷದೊಳಗೆ 20 ವಿಮಾನವನ್ನು ವಿವಿಧ ಮಾರ್ಗಗಳಿಗೆ ತೆರೆದಿದೆ. ಇನ್ನು, ವಿಮಾನ ನೌಕಾಪಡೆಗೆ ಸೇರ್ಪಡೆಗೊಳ್ಳಬೇಕೆಂದರೆ, ಕನಿಷ್ಠ 20 ವಿಮಾನಗಳನ್ನು ಹೊಂದಿರಬೇಕು. ಇದೀಗ ತನ್ನ 20ನೇ ವಿಮಾನವನ್ನು ಪರಿಚಯಿಸಿರುವ ಆಕಾಸ ವಿಮಾನ ಸಂಸ್ಥೆ ಇದೀಗ ವಿಮಾನ ನೌಕಾಪಡೆಗೂ ಸೇರ್ಪಡೆಗೊಂಡಿದೆ.
ಈ ಕುರಿತು ಮಾತನಾಡಿದ ಆಕಾಸ ಏರ್‌ಲೈನ್ಸ್ ಸಂಸ್ಥಾಪಕ, ಸಿಇಒ ವಿನಯ್ ದುಬೆ, ಇಂಧನ ದಕ್ಷತೆಯನ್ನು ಸಹ ಇದು ಕಾಪಾಡಿಕೊಳ್ಳಲು ಹೆಚ್ಚು ಸಹಕಾರಿಯಾಗಿದೆ. ಶೇ. 50ರಷ್ಟು ಕಡಿಮೆ ಶಬ್ದ ಮಾಡಲಿದೆ. ನಮ್ಮ ಸಂಸ್ಥೆ 20 ವಿಮಾನಗಳ ಸಮೂಹವನ್ನು ಹೊಂದಿದೆ. 16 ಭಾರತೀಯ ನಗರಗಳನ್ನು ಸಂಪರ್ಕಿಸುವ 35 ವಿವಿಧ ಮಾರ್ಗಗಳಲ್ಲಿ ಹಾರಾಟ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.