Advertisement

ಧರ್ಮದ ದಾರಿಯಲ್ಲಿ ನಡೆದಾಗ ಸುಖ

12:01 PM Jan 17, 2020 | Naveen |

ಅಜ್ಜಂಪುರ: ಧರ್ಮ ಎಲ್ಲೆ ಮೀರಿದ್ದು. ಅದಕ್ಕೆ ದೇಶ-ವಿದೇಶದ ಪರಿ ಯಿಲ್ಲ ಎಂದು ಸಿರಿಗೆರೆ ಬೃಹನ್ಮಠದ ಜಗದ್ಗುರು ಡಾ| ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

Advertisement

ಅಜ್ಜಂಪುರ ಸಮೀಪದ ಸೊಲ್ಲಾಪುರದಲ್ಲಿ ಶ್ರೀ ಗುರು ಸಿದ್ದರಾಮ ಶಿವಯೋಗಿಗಳ 847ನೇ ಜಯಂತ್ಯುತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಲೌಕಿಕ, ಆಧ್ಯಾತ್ಮಿಕ ಸಮನ್ವಯತೆಯನ್ನು ಬಸವಾದಿ ಶರಣರು ಸಾಧಿಸಿ ತೋರಿಸಿದರು. ಬದಕಿನಲ್ಲಿ ನೆಮ್ಮದಿ, ಸಮನ್ವಯತೆ ಕಾಣಬೇಕಾದರೆ ಇಹದ ಜತೆ ಆಧ್ಯಾತ್ಮಿಕ ಚಿಂತನೆಯೂ ಇರಬೇಕು. ಶರಣ ತತ್ವಗಳು ಇಹ-ಬದುಕಿನ ಎರಡೂ ಮೌಲ್ಯಗಳ ಪ್ರತಿಪಾದನೆ ಮಾಡಿದರು ಎಂದು ತಿಳಿಸಿದರು.

ಯಳನಾಡು ಮಠದ ಶ್ರೀ ಜ್ಞಾನಪ್ರಭು ಸ್ವಾಮೀಜಿ ಆಶೀರ್ವಚನ ನೀಡಿ, ಸತ್ಯಾಸತ್ಯತೆಯನ್ನು ಅಂತರಾತ್ಮದಲ್ಲಿ ಹುಡುಕಬೇಕು. ತನ್ನನ್ನು ತಾನು ಅರಿತು ಸಮಾಜಕ್ಕೆ ಒಳಿತು ಮಾಡುವುದೇ ಮನುಷ್ಯನ ನಿಜವಾದ ಧರ್ಮ ಎಂದು ಹೇಳಿದರು.

ಕಾಂಗ್ರೆಸ್‌ ಮುಖಂಡ ಸಿ.ಎಂ.ಇಬ್ರಾಹಿಂ ಮಾತನಾಡಿ, ತಂದೆ-ತಾಯಿಯ ಸೇವೆ, ಗುರು-ಹಿರಿಯರಿಗೆ ಗೌರವ, ನೆರೆ-ಹೊರೆಯವರಲ್ಲಿ ಪ್ರೀತಿಯಿಂದ ಬಾಳುವ ಸಂಕಲ್ಪವನ್ನು ತೊಡುವಂತೆ ಮನವಿ ಮಾಡಿದರು. ನೊಳಂಬ ಸಮಾಜ ಇಂಜಿನಿಯರಿಂಗ್‌ ಮತ್ತು ಮೆಡಿಕಲ್‌ ಕಾಲೇಜು ತೆರೆಯುವ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ವಿಧಾನ ಪರಿಷತ್‌ ಉಪಸಭಾಪತಿ ಎಸ್‌.ಎಲ್‌. ಧರ್ಮೇಗೌಡ ಮಾತನಾಡಿ, ಪರಿಸರ ರಕ್ಷಣೆ ಆಗಬೇಕು. ನೆಲ-ಜಲ ಉಳಿಯಬೇಕು. ಅರಣ್ಯದ ವಿಸ್ತೀರ್ಣ ಹೆಚ್ಚಾಗಬೇಕು. ಜೀವ ಸಂಕುಲ ಅಧಿಕವಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಪರಿಸರಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು.

Advertisement

ನೊಳಂಬ ಲಿಂಗಾಯಿತ ಸಂಘದ ರಾಜ್ಯಾಧ್ಯಕ್ಷ ಎಸ್‌.ಎಂ.ನಾಗರಾಜು ಮಾತನಾಡಿ, ಸಿದ್ದರಾಮೇಶ್ವರ
ಜಯಂತಿ ಆಚರಣೆಗೆ ಸೊಲ್ಲಾಪುರ ಹಾಗೂ ಸುತ್ತಮುತ್ತಲಿನ ಎಲ್ಲ ಗ್ರಾಮಸ್ಥರು ಹಾಗೂ ಸಿದ್ಧರಾಮೇಶ್ವರರ ಭಕ್ತರು ಸಹಕಾರ ನೀಡಿದ್ದಾರೆ.

ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುವುದಾಗಿ ತಿಳಿಸಿದರು. ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌.ಭೋಜೆಗೌಡ, ಟಿ.ವಿ.ಶಿವಶಂಕರಪ್ಪ, ಟಿ.ಎಚ್‌. ಶಿವಶಂಕರಪ್ಪ, ಕೆ.ಬಿ.ಮಲ್ಲಿಕಾರ್ಜುನ್‌, ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಕ್ಷರಿ, ಮಾಜಿ ಸಂಸದ ಬಿ.ಎನ್‌.ಚಂದ್ರಪ್ಪ, ಕಾಂಗ್ರೆಸ್‌ ಮುಖಂಡ ಕೆ.ಎಸ್‌. ಆನಂದ್‌, ಸಾಹಿತಿ ಚಟ್ನಳ್ಳಿ ಮಹೇಶ್‌, ಗುರುಬಸವ ಮಹಾಸ್ವಾಮಿಗಳು ಭಾಗವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಗ್ಯಾಸ್‌ ರಾಜಣ್ಣ, ಕಾರ್ಯದರ್ಶಿ ಸಿ.ಕೆ. ಸ್ವಾಮಿ, ಹಣಕಾಸು ಸಮಿತಿ ಅಧ್ಯಕ್ಷ ಶಂಭೈನೂರು ಆನಂದಪ್ಪ, ಖಜಾಂಜಿ ಕೃಷ್ಣಮೂರ್ತಿ, ಸಮಾಜ ಸೇವಕ ಗೋಪಿಕೃಷ್ಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next