ಅಜ್ಜಂಪುರ: ಜಿಲ್ಲೆಯಲ್ಲಿ ಯಾವುದೇ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿಲ್ಲ. ಇದು ಶಾಶ್ವತವಾಗಿ ಮುಂದುವರಿಯಬೇಕು. ಇದಕ್ಕಾಗಿ ಮತ್ತಷ್ಟು ಕಠಿಣ ಕ್ರಮ ವಹಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ವಿವಿದ ಇಲಾಖೆಗಳ ಅಧಿಕಾರಿಗಳಿಗಳೊಂದಿಗೆ ಕೋವಿಡ್ ವೈರಸ್ ಹರಡದಂತೆ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಕುರಿತು ಚರ್ಚಿಸಿ ಅವರು ಮಾತನಾಡಿದರು. ಗಡಿ ಭಾಗದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಿ. ರೆಡ್ ಜೋನ್‌ಗಳಿಂದ ಬರುವ ವ್ಯಕಿಗಳ ಮೇಲೆ ನಿಗಾ ವಹಿಸಿ. ಟೈಲರಿಂಗ್, ಬಿಡಿ ಭಾಗಗಳ ರಿಪೇರಿ, ಕಟ್ಟಡ ಕಾರ್ಮಿಕರು ಸೇರಿದಂತೆ ಅಸಂಘಟಿತ ವಲಯದ ಕಾರ್ಮಿಕರಿಗೆ ಕೆಲಸ ಮಾಡಲು ಅವಕಾಶ ಮಾಡಿಕೊಡಿ ಕೊಡಿ. ಪರಿಸ್ಥಿತಿಗೆ ಅನುಗುಣವಾಗಿ ವಿನಾಯಿತಿ ನೀಡಿ ಎಂದರು.
ಶಾಸಕ ಡಿ.ಎಸ್. ಸುರೇಶ್ ಮಾತನಾಡಿ, ಅಜ್ಜಂಪುರದಲ್ಲಿ ಹಾಲು ವಿತರಣೆಯ ಬಗ್ಗೆ ಸಚಿವರು ಕ್ರಮ ಕೈಗೊಳ್ಳಬೇಕು. ತಾಲೂಕಿನಾದ್ಯಂತ ಪಡಿತರ ವಿತರಣೆಯಲ್ಲಿ ಸಾಕಷ್ಟು ದೂರು ಬಂದಿದೆ. ಇದನ್ನು ಅಧಿಕಾರಿಗಳು ಸರಿಪಡಿಸಬೇಕು ಎಂದರು. ಶಾಸಕ ಬೆಳ್ಳಿ ಪ್ರಕಾಶ್ ಮಾತನಾಡಿ, ಪ್ರತಿಯೊಬ್ಬರಿಗೂ ಪಡಿತರ ವಸ್ಥೆ ಸಮರ್ಪಕವಾಗಿ ನೀಡಬೇಕು. ಪಡಿತರ ಚೀಟಿ ಇಲ್ಲದವರಿಗೆ, ಹೊರ ಜಿಲ್ಲೆಯವರಿಗೂ ದಾಖಲೆಗಳನ್ನು ಪಡೆದು ಪಡಿತರ ನೀಡಿ. ಪಡಿತರ ವ್ಯವಸ್ಥೆಯಲ್ಲಿ ಲೋಪ ಆಗದಂತೆ ಎಚ್ಚರ ವಹಿಸಿ ಎಂದರು
ಜಿಲ್ಲಾಧಿಕಾರಿ ಬಗಾದಿ ಗೌತಮ್ ಮಾತನಾಡಿ, ಔಷಧ, ಸ್ಯಾನಿಟೈಸರ್, ಗ್ಲೋಸ್, ಮಾಸ್ಕ್ ದಾಸ್ತಾನಿದೆ. ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಮುಂಚಿತವಾಗಿ ಸಂಪರ್ಕಿಸಿ, ಪಡೆಯಿರಿ. ಆರೋಗ್ಯ ಸಿಬ್ಬಂದಿ ಆಸ್ಪತ್ರೆಗಳಲ್ಲಿ ಕಟ್ಟುನಿಟ್ಟಾಗಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದರು.
ಪೊಲೀಸ್ ವರಿಷ್ಠಾಧಿಕಾರಿ ಹರಿಶ್ ಪಾಂಡೆ ಮಾತನಾಡಿ, ಅಜ್ಜಂಪುರ ತರೀಕೆರೆ ಭಾಗದ ಗಡಿ ಪ್ರದೇಶಗಳಲ್ಲಿ ನಾಕಾಬಂ ದಿ ಹಾಕಿದ್ದು ಜಿಲ್ಲೆಗೆ ಹೊರಗನಿಂದ ಬರುವವರ ಬಗ್ಗೆ ತೀವ್ರ ನಿಗಾ ವಹಿಸಲಾಗಿದೆ. ಜಿಲ್ಲೆಯ ಜನತೆಗೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಸಿಬ್ಬಂದಿ ಕಾವಲಿದ್ದಾರೆ ಎಂದರು. ಆಹಾರ ಇಲಾಖೆ ಅಧಿ ಕಾರಿ ಮಲ್ಲೇಶಪ್ಪ ಮಾತನಾಡಿ, ಪಡಿತರ ವಿತರಿಸಲಾಗಿದೆ. ಮೇ ಮೊದಲ ವಾರದಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಪಡಿತರ ವಿತರಿಸಲಾಗುವುದು ಎಂದರು.
ಟಿಎಚ್‌ಒ ಡಾ| ಚಂದ್ರಶೇಖರ್, ತಹಶೀಲ್ದಾರ್ ವಿಶ್ವೇಶ್ವರ ರೆಡ್ಡಿ, ಡಿವೈಎಸ್‌ಪಿ ರೇಣುಕಾಪ್ರಸಾದ್, ಇಒ ರಾಮ್ ಪ್ರಸಾದ್, ಪಿಎಸ್‌ಐ ಬಸವರಾಜು, ವೈದ್ಯಾಧಿ ಕಾರಿ ನಟರಾಜ್ ಮತ್ತಿತರರು ಇದ್ದರು.