Advertisement
ಅಜ್ಜಂಪುರ ತಾಲೂಕಿನ ಅನುವನಹಳ್ಳಿ ಶಿವನಿ ಗ್ರಾಮದಲ್ಲಿ ರೈತರ ತೋಟಗಳಲ್ಲಿ ಕಳೆದ 2 ತಿಂಗಳಿಂದ 4×4 ಅಳತೆಯಲ್ಲಿ ಹನಿ ನೀರಾವರಿ ಅಳವಡಿಸಲು ಭೂಮಿ ಅಗೆದಿದ್ದು, ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ.
Related Articles
Advertisement
ಇನ್ನೂ ಪೂರ್ಣಗೊಂಡಿರುವ ಸಾಕಷ್ಟು ಕಾಮಗಾರಿಗಳು ಕಳಪೆಯಾಗಿವೆ. ರೈತರೊಂದಿಗೆ ಚರ್ಚಿಸದೆ ತಮಗಿಷ್ಟ ಬಂದ ಹಾಗೆ ಕಾಮಗಾರಿ ನಡೆಸುತ್ತಿದ್ದಾರೆ. ಕೇಳಿದರೆ ಉಡಾಫೆ ಉತ್ತರ ನೀಡುತ್ತಾ ಕಾಲಕಳೆಯುತ್ತಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರ ಜಮೀನಿನಲ್ಲಿ ಕಾಮಗಾರಿಪ್ರಾರಂಭಗೊಂಡು 3-4 ದಿನದೊಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ನಿಯಮವಿದ್ದರೂ ಅಧಿಕಾರಿಗಳು ಹಾಗೂ ಕಾಂಟ್ರ್ಯಾಕ್ಟರ್‌ಗಳ ನಿರ್ಲಕ್ಷ್ಯದಿಂದ ತಿಂಗಳುಗಳೇ ಕಳೆದರೂ ಕಾಮಗಾರಿ ಪೂರ್ಣಗೊಳ್ಳುತ್ತಿಲ್ಲ. ಇದರಿಂದ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ.
ಅಧಿಕಾರಿಗಳ ನಿರ್ಲಕ್ಷ್ಯವೇ ರೈತನಿಗೆ ಶಾಪಅಧಿಕಾರಿಗಳಿಗೆ ಕಾಮಗಾರಿ ಬಗ್ಗೆ ಮಾಹಿತಿಯಿಲ್ಲವಾದರೆ ಸಮಸ್ಯೆ ಗೆಹಿಸುವವರ್ಯಾರು. ಸರ್ಕಾರ ಹನಿ ನೀರಾವರಿ ಯೋಜನೆ ಕಲ್ಪಿಸುವುದರಿಂದ ಈ ಭಾಗದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಇನ್ನಾದರೂ ತಮ್ಮ ಬದುಕು ಬಂಗಾರವಾಗಲಿದೆ ಎಂಬ ಕನಸು ಹೊಂದಿದ್ದ ರೈತನಿಗೆ ಅಧಿಕಾರಿಗಳ ನಿರ್ಲಕ್ಷ್ಯ ಶಾಪವಾಗಿದೆ. ಆದರೆ, ಕಳೆದ 2 ತಿಂಗಳಿಂದ ಬಾರದ ಅಧಿಕಾರಿಗಳು ಕೇವಲ ಭರವಸೆ ನೀಡುತ್ತಿದ್ದಾರೆ. ಕೂಡಲೇ ನಮ್ಮ ಸಮಸ್ಯೆಗಳಿಗೆ ಸ್ಪಂದಿಸಬೇಕು. ನಷ್ಟದ ವೆಚ್ಚವನ್ನು ಭರಿಸಬೇಕು. ಇಲ್ಲವಾದರೆ ಬರಗಾಲದ ಈ ಸ್ಥಿತಿಯಲ್ಲಿ ಆತ್ಮಹತ್ಯೆಯೇ ನಮಗೆ ಉಳಿದಿರುವ ದಾರಿ ಎಂಬುದು ಅನ್ನದಾತರ ನೋವಿನ ಮಾತಾಗಿದೆ. ತಾವು ಕಾಮಗಾರಿ ಪ್ರಾರಂಭಕ್ಕೂ ಮುನ್ನ ಮೆಗಾ ಹಾಗೂ ನೆಟಾಫಿನ್ ಹನಿ ನೀರಾವರಿ ಕಂಪನಿ ಜೊತೆ ಒಪ್ಪಂದ ಮಾಡಿಕೊಂಡಿದ್ದು, ಕೆಲಸದ ಸಮಯದಲ್ಲಿ ಶೇ. 60 ರಷ್ಟು ಹಣ ಹಾಗೂ ಕಾಮಗಾರಿ ಪೂರ್ಣಗೊಂಡ ನಂತರ ಶೇ. 40ರಷ್ಟು ಹಣ ನೀಡುವುದಾಗಿ ತಿಳಿಸಿದ್ದರು. ಇದೀಗ ಕೆಲಸ ಪ್ರಾರಂಭಿಸಿ 2 ತಿಂಗಳು ಕಳೆದರೂ ಹಣ ನೀಡುತ್ತಿಲ್ಲ. ಹಾಗಾಗಿ, ಕಾಮಗಾರಿ ಸ್ಥಗಿತಗೊಳಿಸಿದ್ದೇವೆ.
ಕಾಂತರಾಜು, ಕಾಂಟ್ರ್ಯಾಕ್ಟರ್ ಕೂಡಲೇ ರೈತರ ಜಮೀನುಗಳಿಗೆ ತೆರಳಿ ಅಗೆದಿರುವ ಭೂಮಿಯನ್ನು ಮುಚ್ಚಿಕೊಡಲಾಗುವುದು. ನಂತರ ಕಾಮಗಾರಿ ಪ್ರಾರಂಭಿಸಲಾಗುವುದು.
ಹರೀಶ್, ಮ್ಯಾನೇಜರ್, ಭದ್ರಾ
ಮೇಲ್ದಂಡೆ ಹನಿ ನೀರಾವರಿ ಕಾಮಗಾರಿ ನಮಗೆ ಈ ಬಗ್ಗೆ ಮಾಹಿತಿಯಿಲ್ಲ. ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗುವುದು.
ಸುರೇಶ್, ಎಇಇ, ಭದ್ರಾ
ಮೇಲ್ದಂಡೆ ಹನಿ ನೀರಾವರಿ ಮಂಜುನಾಥ್ ಎನ್.ಎಸ್.