Advertisement

ಪುತ್ರನ ಲೋಕಸಭಾ ಸ್ಪರ್ಧೆಯ ಸೋಲಿಗೆ ಹೊಣೆ ಹೊತ್ತ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌

10:14 AM May 29, 2019 | Team Udayavani |

ಮುಂಬಯಿ : ಹಿರಿಯ ಮಹಾರಾಷ್ಟ್ರ ಎನ್‌ಸಿಪಿ ನಾಯಕ ಅಜಿತ್‌ ಪವಾರ್‌ ಅವರು ಮವಾಲ್‌ ಲೋಕಸಭಾ ಕ್ಷೇತ್ರದಿಂದ ಚೊಚ್ಚಲವಾಗಿ ಸ್ಪರ್ಧಿಸಿದ್ದ ತನ್ನ ಪುತ್ರ ಪಾರ್ಥನ ಸೋಲಿಗೆ ಸಂಪೂರ್ಣ ಹೊಣೆ ಹೊತ್ತಿದ್ದಾರೆ.

Advertisement

ಶಿವಸೇನೆಯ ಶ್ರೀರಂಗ ಬಾರ್ನೆ ಅವರು ಪಾರ್ಥ್ ಅವರನ್ನು 2,15,913 ಮತಗಳ ಅಂತರದಿಂದ ಸೋಲಿಸಿದ್ದರು. ಮವಾಲ್‌ ಲೋಕಸಭಾ ಕ್ಷೇತ್ರವು ಪುಣೆ ಮತ್ತು ರಾಯಗಢ ಜಿಲ್ಲೆಯ ಭಾಗಗಳನ್ನು ಒಳಗೊಂಡಿದೆ.

ಮಾಜಿ ಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು, “ಜನರು ನರೇಂದ್ರ ಮೋದಿ ಅವರನ್ನು ಮತ್ತೆ ದೇಶದ ಪ್ರಧಾನಿಯಾಗಿ ಕಾಣುವ ಸಂಕಲ್ಪವನ್ನು ಮೊದಲೇ ಮಾಡಿದ್ದರು’ ಎಂದು ಮಗನ ಸೋಲಿಗೆ ಕಾರಣ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next