Advertisement

ಪವಾರ್ ಗೆ ಇಲ್ಲ ‘ಪವರ್’; ಎನ್ ಸಿಪಿ ಪೋಸ್ಟರ್ ನಿಂದ ಅಜಿತ್ ಪವಾರ್ ಔಟ್!

03:53 PM Jun 28, 2023 | Team Udayavani |

ಹೊಸದಿಲ್ಲಿ: ಅಜಿತ್ ಪವಾರ್ ಅವರನ್ನು ಬಿಟ್ಟು ಹೊಸ ಕಾರ್ಯಾಧ್ಯಕ್ಷರನ್ನು ನೇಮಿಸಿದ ಬಳಿಕ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದಲ್ಲಿ ಮತ್ತೊಮ್ಮೆ ಪವಾರ್ ‘ಪವರ್’ ಬಗ್ಗೆ ಅನುಮಾನವೆದ್ದಿದೆ.

Advertisement

ದೆಹಲಿಯಲ್ಲಿನ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ಸ್ಥಳದಲ್ಲಿ ಪ್ರದರ್ಶಿಸಲಾದ ಎನ್‌ಸಿಪಿ ಪೋಸ್ಟರ್‌ ಗಳಲ್ಲಿ ಹಿರಿಯ ನಾಯಕ ಅಜಿತ್ ಪವಾರ್ ಪೋಟೊ ನಾಪತ್ತೆಯಾಗಿದೆ.

ಪೋಸ್ಟರ್‌ ನಲ್ಲಿ ಪಕ್ಷದ ಅಧ್ಯಕ್ಷ ಶರದ್ ಪವಾರ್, ಕಾರ್ಯಾಧ್ಯಕ್ಷರಾದ ಸುಪ್ರಿಯಾ ಸುಳೆ ಮತ್ತು ಪ್ರಫುಲ್ ಪಟೇಲ್ ಫೋಟೊ ಮಾತ್ರ ಹಾಕಲಾಗಿದೆ.

ಇದನ್ನೂ ಓದಿ:ಚೀನಾ: ಆಸ್ಪತ್ರೆಯ ಊಟದ ಡಬ್ಬಿಯಲ್ಲಿ ಇಲಿಯ ತಲೆ ಪತ್ತೆ! ತಿಂಗಳಲ್ಲೇ ಪತ್ತೆಯಾದ ಎರಡನೇ ಪ್ರಕರಣ

ಶರದ್ ಪವಾರ್ ಅವರ ಸೋದರಳಿಯ ಅಜಿತ್ ಪವಾರ್ ಅವರು ಎನ್‌ಸಿಪಿ ಸಂಘಟನೆಯಲ್ಲಿ ತನಗೆ ಪಾತ್ರ ನೀಡುವಂತೆ ಮನವಿ ಮಾಡಿದ ನಂತರ ಈ ಬೆಳವಣಿಗೆಗಳು ನಡೆದಿದೆ.

Advertisement

“ನನ್ನನ್ನು ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಮುಕ್ತಗೊಳಿಸುವಂತೆ ನಾನು ಪಕ್ಷವನ್ನು ಕೇಳಿದ್ದೇನೆ. ನಾನು ಪಕ್ಷಕ್ಕಾಗಿ ಕೆಲಸ ಮಾಡಲು ಮತ್ತು ಅದು ನೀಡಿದ ಜವಾಬ್ದಾರಿಯನ್ನು ಪೂರೈಸಲು ಬಯಸುತ್ತೇನೆ ಎಂದು ಅಜಿತ್ ಪವಾರ್ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ಶರದ್ ಪವಾರ್, ಈ ನಿರ್ಧಾರವನ್ನು ಒಬ್ಬ ವ್ಯಕ್ತಿ ಮಾಡಲಾಗುವುದಿಲ್ಲ. ಇದಕ್ಕೆ ಪಕ್ಷದ ಪ್ರಮುಖ ನಾಯಕರು ಚರ್ಚೆ ಮಾಡಿ ತೀರ್ಮಾನ ಮಾಡುತ್ತಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next