Advertisement

ಅಜಿತ್‌ ಕೌರ್‌- ಭುಲ್ಲರ್‌ಗೆ ಕುವೆಂಪು ರಾಷ್ಟ್ರೀಯ ಪುರಸ್ಕಾರ

10:23 PM Dec 24, 2019 | Team Udayavani |

ತೀರ್ಥಹಳ್ಳಿ: ಪಂಜಾಬ್‌ನ ಸಾಹಿತಿಗಳಾದ ಡಾ.ಅಜಿತ್‌ ಕೌರ್‌ ಹಾಗೂ ಗುರುಬಚ್ಚನ್‌ ಸಿಂಗ್‌ ಭುಲ್ಲರ್‌ ಅವರಿಗೆ ಪ್ರಸಕ್ತ ವರ್ಷದ ಕುವೆಂಪು ರಾಷ್ಟ್ರೀಯ ಪುರಸ್ಕಾರ ಘೋಷಿಸಲಾಗಿದೆ. ಶಿವಮೊಗ್ಗ ಜಿಲ್ಲೆಯ ಕುಪ್ಪಳಿ ಹೇಮಾಂಗಣದಲ್ಲಿ ಡಿ.29ರಂದು ನಡೆಯಲಿರುವ ರಾಷ್ಟ್ರಕವಿ ಕುವೆಂಪು 115ನೇ ಜನ್ಮದಿನೋತ್ಸವ ವಿಶ್ವಮಾನವ ದಿನಾಚರಣೆಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪುರಸ್ಕೃತರಿಬ್ಬರಿಗೂ 2.50 ಲಕ್ಷ ರೂ. ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾ ಗುವುದು ಎಂದು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಾರ್ಯದರ್ಶಿ ಕಡಿದಾಳ್‌ ಪ್ರಕಾಶ್‌ ತಿಳಿಸಿದ್ದಾರೆ.

Advertisement

ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಇದೇ ವೇಳೆ “ಮಂತ್ರಮಾಂಗಲ್ಯ’ ಕೃತಿಯ ಇಂಗ್ಲಿಷ್‌ ಆವೃತ್ತಿ ಬಿಡುಗಡೆಯಾಗಲಿದೆ. ಶಾಸಕ ಆರಗ ಜ್ಞಾನೇಂದ್ರ ಅಧ್ಯಕ್ಷತೆ ವಹಿಸಲಿದ್ದಾರೆ. ಗಾಂಧಿ -150 ಪುಸ್ತಕವನ್ನು ಸಚಿವ ಕೆ.ಎಸ್‌.ಈಶ್ವರಪ್ಪ ಹಾಗೂ 2020ರ ಕ್ಯಾಲೆಂಡರ್‌ ಅನ್ನು ಸಚಿವ ಸಿ.ಟಿ.ರವಿ ಬಿಡುಗಡೆ ಮಾಡಲಿದ್ದಾರೆ. ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next