ಹೊಸದಿಲ್ಲಿ: ಶಾಂಘೈ ಸಹಕಾರ ಒಕ್ಕೂಟ (ಎಸ್‌ಸಿಒ)ದ ಸದಸ್ಯ ರಾಷ್ಟ್ರಗಳು ಸಾರ್ವ ಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಪರಸ್ಪರ ಗೌರವ ನೀಡಬೇಕು ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹೇಳಿದರು.
ಈ ಮೂಲಕ ಚೀನಗೆ ತಿವಿದರು. ಹೊಸದಿಲ್ಲಿಯಲ್ಲಿ ನಡೆದ ಶಾಂಘೈ ಸಹಕಾರ ಒಕ್ಕೂಟ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯಲ್ಲಿ ಬುಧವಾರ ಭಾಗವಹಿಸಿ ಅವರು ಮಾತನಾಡಿದರು.
“ನೆರೆಯ ರಾಷ್ಟ್ರಗಳ ಗಡಿಗಳನ್ನು ಅತಿಕ್ರಮಿಸ ದಿರುವುದು, ಬಲವನ್ನು ಉಪಯೋಗಿಸದೇ ಇರುವುದು, ಬೆದರಿಕೆ ಹಾಕದಿರುವುದು, ಏಕಪಕ್ಷೀಯ ಮಿಲಿಟರಿ ಶ್ರೇಷ್ಠತೆಯನ್ನು ಬಯಸದಿರುವ ಶಪಥವನ್ನು ಕೈಗೊಳ್ಳಬೇಕು. ಜತೆಗೆ ಅಂತಾರಾಷ್ಟ್ರೀಯ ಸಂಬಂಧಗಳನ್ನು ಉತ್ತಮಪಡಿಸಿಕೊಳ್ಳಬೇಕು,’ ಎಂದು ಪ್ರತಿಪಾದಿಸಿದರು.