ಮುಂಬೈ: ಭಾರತೀಯ ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ವೆಸ್ಟ್ ಇಂಡೀಸ್ ಗೆ ತೆರಳಲು ಸಜ್ಜಾಗಿದ್ದಾರೆ. ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಭಾರತೀಯ ತಂಡವನ್ನು ಭೇಟಿಯಾಗಲಿದ್ದಾರೆ.
ಅಹಮದಾಬಾದ್ ನಲ್ಲಿ ಅಕ್ಟೋಬರ್ 5 ರಿಂದ ಪ್ರಾರಂಭವಾಗುವ 50 ಓವರ್ ಏಕದಿನ ವಿಶ್ವಕಪ್ 2023 ರ ಮಾರ್ಗ ನಕ್ಷೆಯನ್ನು ಚರ್ಚಿಸಲು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಅವರನ್ನು ಭೇಟಿ ಮಾಡಲಿದ್ದಾರೆ. ಭಾರತವು ಅಕ್ಟೋಬರ್ 8 ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸುವ ಮೂಲಕ ಅಭಿಯಾನವನ್ನು ಆರಂಭಿಸಲಿದೆ.
ಪ್ರಸ್ತುತ ಸಲೀಲ್ ಅಂಕೋಲಾ ವೆಸ್ಟ್ ಇಂಡೀಸ್‌ನಲ್ಲಿದ್ದಾರೆ ಆದರೆ ಟೆಸ್ಟ್ ಸರಣಿ ಮುಗಿದ ನಂತರ ಅವರು ಹಿಂತಿರುಗಲಿದ್ದಾರೆ. ವೈಟ್ ಬಾಲ್ ಲೆಗ್ ಪ್ರಾರಂಭವಾಗುವ ಮೊದಲು ಅಜಿತ್ ತಂಡವನ್ನು ಸೇರಿಕೊಳ್ಳಲಿದ್ದಾರೆ” ಎಂದು ವಿಷಯಗಳ ಬಗ್ಗೆ ತಿಳಿದಿರುವ ಬಿಸಿಸಿಐ ಮೂಲವೊಂದು ಪಿಟಿಐಗೆ ತಿಳಿಸಿದೆ.
ಇದನ್ನೂ ಓದಿ:ಕೋಳಿ ಕಥೆ ಹೇಳಿ ಸರ್ಕಾರಕ್ಕೆ ಅಭಿವೃದ್ದಿ ಪಾಠ ಮಾಡಿದ ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ
ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಅಗರ್ಕರ್ ಅವರು ತಂಡದ ಮ್ಯಾನೇಜ್‌ಮೆಂಟ್ ಅನ್ನು ವೈಯಕ್ತಿಕವಾಗಿ ಭೇಟಿ ಮಾಡಲು ಅವಕಾಶವನ್ನು ಸಿಕ್ಕಿಲ್ಲ. ವಿಶ್ವಕಪ್ ಗೆ ಭಾರತದ ಕಾರ್ಯತಂತ್ರ ಏನೆಂಬುದರ ಬಗ್ಗೆ ವಿಸ್ತಾರವಾದ ನೀಲನಕ್ಷೆಯನ್ನು ರಚಿಸಲು ಇದು ಒಂದು ಅವಕಾಶವಾಗಿದೆ.
ತಂಡದ ನಿರ್ವಹಣೆ ಮತ್ತು ಆಯ್ಕೆ ಸಮಿತಿಯು ಫಿಟ್‌ನೆಸ್ ಸಮಸ್ಯೆಗಳು ಮತ್ತು ಕೆಲಸದ ಹೊರೆ ನಿರ್ವಹಣೆಯನ್ನು ಹೊರತುಪಡಿಸಿ ವಿಶ್ವಕಪ್‌ಗಾಗಿ ಎದುರು ನೋಡುತ್ತಿರುವ ಪ್ರಮುಖ 20 ಆಟಗಾರರ ಬಗ್ಗೆ ಸಂಪರ್ಕದಲ್ಲಿರ ಬೇಕಾಗುತ್ತದೆ. ಆಯ್ಕೆದಾರರ ಅಧ್ಯಕ್ಷರು ಮತ್ತು ತಂಡದ ಮ್ಯಾನೇಜ್ ಮೆಂಟ್ ಸಹ ಪರಿವರ್ತನಾ ಯೋಜನೆಯನ್ನು ಚರ್ಚಿಸುತ್ತಾರೆ.