Advertisement

ಬಿಸಿಸಿಐ ಆಯ್ಕೆ ಸಮಿತಿಗೆ ಅಜಿತ್‌ ಅಗರ್ಕರ್‌ ಅಧ್ಯಕ್ಷ?

01:33 AM Jan 25, 2020 | Sriram |

ಹೊಸದಿಲ್ಲಿ: ಭಾರತ ಕ್ರಿಕೆಟ್‌ ಆಯ್ಕೆ ಸಮಿತಿಯ 2 ಸ್ಥಾನಕ್ಕೆ ಮಾಜಿ ಕ್ರಿಕೆಟಿಗರನೇಕರು ಅರ್ಜಿ ಸಲ್ಲಿಸಿದ್ದಾರೆ. ಈ ಪಟ್ಟಿಗೆ ಅಜಿತ್‌ ಅಗರ್ಕರ್‌ ಹೆಸರು ಕೂಡ ಸೇರ್ಪಡೆಗೊಂಡಿದೆ. ಅಗರ್ಕರ್‌ ಹೆಸರೀಗ ಮುಂಚೂಣಿಯಲ್ಲಿದ್ದು, ಒಂದು ವೇಳೆ ಅವರು ಆಯ್ಕೆಯಾದರೆ ಅಧ್ಯಕ್ಷ ಸ್ಥಾನವೂ ಅವರಿಗೆ ಸಿಗುವುದು ಖಚಿತ ಎನ್ನಲಾಗಿದೆ.

Advertisement

ಕರ್ನಾಟಕದ ವೆಂಕಟೇಶ್‌ ಪ್ರಸಾದ್‌ ಕೂಡ ಅರ್ಜಿ ಸಲ್ಲಿಸಿದ್ದಾರೆ. ಆದರೆ ಅವರು ಕಿರಿಯರ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದಾರೆ. ಒಂದೂವರೆ ವರ್ಷದ ಅಧಿಕಾರದ ಅವಧಿ ಬಾಕಿ ಇರುವುದು ಪ್ರಸಾದ್‌ಗೆ ಅಡ್ಡಗಾಲಾಗುವ ಸಾಧ್ಯತೆ ಇದೆ. ಇದು ಅಗರ್ಕರ್‌ ಹಾದಿಯನ್ನು ಸುಗಮಗೊಳಿಸಿದೆ. ಆಗ ಮುಂಬಯಿಯವರಾದ ಅವರು ಆಯ್ಕೆ ಸಮಿತಿಯಲ್ಲಿ ಪಶ್ಚಿಮ ವಲಯವನ್ನು ಪ್ರತಿನಿಧಿಸಲಿದ್ದಾರೆ.

ಏಕದಿನದಲ್ಲಿ ಬರೀ 23 ಪಂದ್ಯಗಳಿಂದ 50 ವಿಕೆಟ್‌ ಉರುಳಿಸಿ ದಾಖಲೆ ನಿರ್ಮಿಸಿರುವ ಅಗರ್ಕರ್‌ ಒಟ್ಟು 26 ಟೆಸ್ಟ್‌, 191 ಏಕದಿನ, 3 ಟಿ20 ಪಂದ್ಯಗಳನ್ನು ಆಡಿ 349 ವಿಕೆಟ್‌ ಪಡೆದಿದ್ದಾರೆ. ಏಕದಿನದಲ್ಲಿ ಭಾರತದ 3ನೇ ಗರಿಷ್ಠ ವಿಕೆಟ್‌ ಸಾಧಕನಾಗಿದ್ದಾರೆ (288).

ಅರ್ಜಿ ಸಲ್ಲಿಸಲು ಶುಕ್ರವಾರ ಕೊನೆಯ ದಿನವಾಗಿತ್ತು.
ಸ್ಪರ್ಧೆಯಲ್ಲಿರುವ ಅಭ್ಯರ್ಥಿಗಳು: ಅಜಿತ್‌ ಅಗರ್ಕರ್‌ (ಮುಂಬಯಿ), ವೆಂಕಟೇಶ ಪ್ರಸಾದ್‌ (ಕರ್ನಾಟಕ), ಚೇತನ್‌ ಶರ್ಮ (ಹರ್ಯಾಣ), ನಯನ್‌ ಮೊಂಗಿಯ (ಬರೋಡ), ಎಲ್‌. ಶಿವರಾಮಕೃಷ್ಣನ್‌ (ತಮಿಳುನಾಡು), ರಾಜೇಶ್‌ ಚೌಹಾಣ್‌ (ಮಧ್ಯಪ್ರದೇಶ), ಅಮಯ್‌ ಖುರಾಶಿಯ (ಮಧ್ಯಪ್ರದೇಶ), ಗ್ಯಾನೇಂದ್ರ ಪಾಂಡೆ (ಉತ್ತರಪ್ರದೇಶ), ಪ್ರೀತಮ್‌ ಗಂಧೆ (ವಿದರ್ಭ).

Advertisement

Udayavani is now on Telegram. Click here to join our channel and stay updated with the latest news.

Next