ಮೆಲ್ಬರ್ನ್: ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಭರ್ಜರ ಶತಕದ ನೆರವಿನಿಂದ ಟೀಂ ಇಂಡಿಯಾ ಮೆಲ್ಬರ್ನ್ ಟೆಸ್ಟ್ ಪಂದ್ಯದಲ್ಲಿ ಉತ್ತಮ ಹಿಡಿತ ಸಾಧಿಸಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಐದು ವಿಕೆಟ್ ನಷ್ಟಕ್ಕೆ 277 ರನ್ ಗಳಿಸಿದ್ದು, 82 ರನ್ ಮುನ್ನಡೆ ಸಾಧಿಸಿದೆ.
ನಾಯಕ ಅಜಿಂಕ್ಯ ರಹಾನೆ ಸಮಯೋಚಿತ ಆಟವಾಡಿ ತಂಡವನ್ನು ಸಂಕಟದಿಂದ ಪಾರು ಮಾಡಿದರು. ಆಸೀಸ್ ವೇಗಿಗಳನ್ನು ದಿಟ್ಟ ರೀತಿಯಲ್ಲಿಎದುರಿಸಿದ ರಹಾನೆ 12ನೇ ಟೆಸ್ಟ್ ಶತಕ ಬಾರಿಸಿದರು.
ಎರಡನೇ ದಿನದಾಟ ಆರಂಭಿಸಿದ ಭಾರತಕ್ಕೆ ಗಿಲ್– ಪೂಜಾರ ಅರ್ಧಶತಕದ ಜೊತೆಯಾಟವಾಡಿ ಆಧರಿಸಿದರು. ಗಿಲ್ 45 ರನ್ ಗಳಿಸಿ ಔಟಾದರೆ, ಹನುಮ ವಿಹಾರಿ 21, ಪಂತ್ 29 ರನ್ ಗಳಿಸಿದರು.
ಇದನ್ನೂ ಓದಿ:ಮೆಲ್ಬರ್ನ್ ಅಂಗಳದಲ್ಲಿ ಡೀನ್ ಜೋನ್ಸ್ ಸ್ಮರಣೆ
173 ರನ್ ಗೆ ಐದು ವಿಕೆಟ್ ಕಳೆದುಕೊಂಡಲ್ಲಿಂದ ಜೊತೆಯಾದ ರಹಾನೆ – ಜಡೇಜಾ ಜೋಡಿ ಅಜೇಯ ಶತಕದ ಜೊತೆಯಾಟ ಆಡಿ ತಂಡವನ್ನು ಆಧರಿಸಿದರು. ರಹಾನೆ ಅಜೇಯ 104, ರವೀಂದ್ರ ಜಡೇಜಾ ಅಜೇಯ 40 ರನ್ ಗಳಿಸಿ ಆಡುತ್ತಿದ್ದಾರೆ.
ಭಾರತ ತಂಡ 82 ರನ್ ಗಳ ಬಹುಮೂಲ್ಯ ಮುನ್ನಡೆ ಸಾಧಿಸಿದ್ದು, ಉಳಿದ ಐದು ವಿಕೆಟ್ ನೆರವಿನಿಂದ ಇನ್ನಷ್ಟು ರನ್ ಕಲೆಹಾಕಿ ಆಸೀಸ್ ಮೇಲೆ ಒತ್ತಡ ಹೇರುವ ಯೋಜನೆಯಲ್ಲಿದೆ.
ಆಸೀಸ್ ಪರ ಕಮಿನ್ಸ್ ಮತ್ತು ಸ್ಟಾರ್ಕ್ ತಲಾ ಎರಡು ವಿಕೆಟ್ ಪಡೆದರು. ಒಂದು ವಿಕೆಟ್ ನಥನ್ ಲಯಾನ್ ಪಾಲಾಯಿತು.