Advertisement

ಅಜೆಕಾರು ಕಲಾಭಿಮಾನಿ ಬಳಗದಿಂದ ಯಕ್ಷಗಾನ ಪ್ರದರ್ಶನ

06:10 PM Oct 28, 2018 | |

ಮುಂಬಯಿ: ಆರ್ಥಿಕವಾಗಿ ಬಲಾಡ್ಯ ರಾಗಿರುವವರಿಗೆ ಸಮ್ಮಾನ, ಬಿರುದುಗಳನ್ನು ಪ್ರಧಾನಿಸುವ ಈ ಕಾಲಘಟ್ಟದಲ್ಲಿ ನಿಜವಾದ ಸಾಧನೆಗೈದ ಸಾಧಕರನ್ನು ನಾವು ಗುರುತಿಸುವಲ್ಲಿ ವಿಫಲರಾಗಿದ್ದೇವೆ. ತೆರೆಯ ಮರೆಯಲ್ಲಿದ್ದು ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ, ಅವಿರ ತವಾಗಿ ಶ್ರಮಿಸುವವನ್ನು ಗೌರವಿಸಿದಾಗ ಅದರ ಘನತೆ, ಗೌರವ ಮೌಲ್ಯಗಳು ಉತ್ಕೃಷ್ಟತೆ ಹೊಂ ದಲು ಸಾಧ್ಯವಿದೆ ಎಂದು ಬಂಟರ ಸಂಘ ಮುಂಬಯಿ ಮೀರಾ-ಭಾಯಂದರ್‌ ಪ್ರಾದೇ ಶಿಕ ಸಮಿತಿಯ ಕಾರ್ಯಾಧ್ಯಕ್ಷ ಗಿರೀಶ್‌ ಶೆಟ್ಟಿ ತೆಳ್ಳಾರ್‌ ನುಡಿದರು.

Advertisement

ಅ.26 ರಂದು ಮೀರಾರೋಡ್‌ ಪೂರ್ವದ ಸೈಂಟ್‌ ಥೋಮಸ್‌ ಚರ್ಚ್‌ ಸಭಾಗೃಹದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ನಡೆದ ಯಕ್ಷಗಾನ ಪ್ರದರ್ಶನ ಮತ್ತು ಸಾಧ ಕರಿಗೆ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಸಮ್ಮಾನಿತರು ಬದುಕಿನಲ್ಲಿ ಹಲವಾರು ಕಷ್ಟ, ಕಾರ್ಪಣ್ಯಗಳನ್ನು ಎದುರಿಸಿದವರು. ಅವರಲ್ಲಿ ಅಧಿಕಾರ, ಹಣ, ಅಂತಸ್ತು ಇಲ್ಲದಿರಬಹುದು. ಆದರೂ ಅದಕ್ಕಿಂತ ಮಿಗಿಲಾದ ಮಾನವಧರ್ಮ ಅವರ ಆಸ್ತಿಯಾಗಿದೆ. ಇದು ಎಲ್ಲರಿಗೂ ಮಾರ್ಗದರ್ಶನವಾಗಲಿ ಎಂದು ನುಡಿದು ಶುಭಹಾರೈಸಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕಲಾ ಜಗತ್ತು ವಿಜಯಕುಮಾರ್‌ ಶೆಟ್ಟಿ ಅವರು, ಮಹಾರಾಷ್ಟÅದಲ್ಲಿ ಕರ್ನಾಟಕದ ವಿಭಿನ್ನ ಕಲಾಪ್ರಕಾರಗಳನ್ನು ಪರಿಚಯಿಸುತ್ತಿರುವ ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರ ಸಾಧನೆ ಅದ್ವಿತೀ ಯವಾಗಿದೆ. ಅವರೋರ್ವ ಯಶಸ್ವಿ ಕಲಾ ಸಂಘಟಕರಾಗಿದ್ದಾರೆ. ಮೀರಾರೋಡ್‌ನ‌ ಜನತೆ ಸಂಸ್ಕೃತಿಯ ಆರಾಧಕರು. ಕಲಾಪೋಷಕರಾದ ನಾವೆಲ್ಲ ಸಂಸ್ಕಾರ, ಸಂಪ್ರದಾಯಗಳಿಗೆ ಕಟಿಬದ್ಧರಾಗೋಣ ಎಂದು ನುಡಿದರು.

ಸಮಾರಂಭದಲ್ಲಿ ಮೀರಾರೋಡ್‌ ನವತ ರುಣ ಮಿತ್ರ ಮಂಡಳಿಯ ಅಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿಗುತ್ತು, ರಂಗಕಲಾವಿದ ಜಿ. ಕೆ. ಕೆಂಚನಕೆರೆ, ಮೀರಾ-ಡಹಾಣೂ ಬಂಟ್ಸ್‌ನ  ಮೀರಾ-ಭಾಯಂದರ್‌ ವಲಯದ ಕಾರ್ಯದರ್ಶಿ ಗುಣಕಾಂತ್‌ ಶೆಟ್ಟಿ ಕರ್ಜೆ, ಕಾರ್ಯಾಧ್ಯಕ್ಷ ರಾಜೇಶ್‌ ಶೆಟ್ಟಿ ಕಾಪು ಇವರನ್ನು ವೇದಿಕೆಯ ಗಣ್ಯರು ಸಮ್ಮಾನಿಸಿದರು. ನಿರ್ದೇಶಕ ಜಗದೀಶ್‌ ಶೆಟ್ಟಿ ಕೆಂಚನಕೆರೆ ಅವರನ್ನು ಗೌರವಿಸಲಾಯಿತು.

ಲಕ್ಷ್ಮೀನಾರಾಯಣ ರೈ ಹರೇಕಳ ಅವರು ಸಮ್ಮಾನ ಪತ್ರ ವಾಚಿಸಿದರು. ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ ಗಣ್ಯರುಗಳನ್ನು ಗೌರವಿಸಿದರು. ಬಾಬಾ ಪ್ರಸಾದ್‌ ಅರಸ ಕುತ್ಯಾ ರ್‌ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರ್ವಹಿಸಿದರು. ಪತ್ರಕರ್ತ ವೈ. ಟಿ. ಶೆಟ್ಟಿ, ಜಗದೀಶ್‌ ಶೆಟ್ಟಿ ಪಂಜನಡ್ಕ ಸಹಕರಿಸಿದರು.

Advertisement

ವೇದಿಕೆಯಲ್ಲಿ ಮೀರಾರೋಡ್‌ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಾಂತಿಂಜ ಜನಾರ್ಧನ ಭಟ್‌, ಜ್ಯೋತಿಬ್ರಹ್ಮ ವಿಶ್ವನಾಥ್‌ ಭಟ್‌, ಸೈಂಟ್‌ ಆ್ಯಗ್ನೇಸ್‌ ಹೈಸ್ಕೂಲ್‌ನ ಕಾರ್ಯಾಧ್ಯಕ್ಷ ಅರುಣೋದಯ ರೈ, ಮೀರಾರೋಡ್‌ ಶ್ರೀ ಲಕ್ಷಿ¾àನಾರಾಯಣ ಭಜನಾ ಸಮಿತಿಯ ಅಧ್ಯಕ್ಷ ಹರೀಶ್‌ ಪೂಜಾರಿ, ಬಂಟರ ಸಂಘ ಮೀರಾ-ಭಾಯಂದರ್‌ ಪ್ರಾದೇಶಿಕ ಸಮಿತಿಯ ಕೋಶಾಧಿಕಾರಿ ರಮೇಶ್‌ ಶೆಟ್ಟಿ ಸಿದ್ಧಕಟ್ಟೆ, ಕಲಾಪೋಷಕರಾದ ಮಧುಕರ ಶೆಟ್ಟಿ ಅಜೆಕಾರು, ಜಗದೀಶ್‌ ಶೆಟ್ಟಿ, ವಸಂತಿ ಶೆಟ್ಟಿ, ಶಾಲಿನಿ ಎಸ್‌. ಶೆಟ್ಟಿ, ಮೀರಾ-ಡಹಾಣೂ ಬಂಟ್ಸ್‌ನ ಉಪಾಧ್ಯಕ್ಷ ಸಂಪತ್‌ ಶೆಟ್ಟಿ ಪಂಜದಗುತ್ತು, ಆನಂದ ಶೆಟ್ಟಿ ಐಕಳ, ಮುನ್ನಲಾಯಿಗುತ್ತು ಸಚ್ಚಿದಾನಂದ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಅಜೆಕಾ ರು ಕಲಾಭಿಮಾನಿ ಬಳಗ ಮುಂಬಯಿ ಇದರ ತವರೂರ ಕಲಾವಿದರಿಂದ ಬಪ್ಪನಾಡು ಕ್ಷೇತ್ರ ಮಹಾತೆ¾ ಬಯಲಾಟ ಪ್ರದರ್ಶ ನಗೊಂಡಿತು.

 ಚಿತ್ರ-ವರದಿ : ರಮೇಶ್‌ ಅಮೀನ್‌

Advertisement

Udayavani is now on Telegram. Click here to join our channel and stay updated with the latest news.

Next