Advertisement

Ajekar: ಗೂಡ್ಸ್ ವಾಹನ ಢಿಕ್ಕಿ; ಪಾದಚಾರಿ ಸಾವು

08:53 PM Oct 26, 2024 | Team Udayavani |

ಅಜೆಕಾರು: ಗೂಡ್ಸ್‌ ವಾಹನವೊಂದು ಢಿಕ್ಕಿಯಾಗಿ ತಮಿಳುನಾಡು ಮೂಲದ ಕಾರ್ಮಿಕ ಮೃತಪಟ್ಟ ಘಟನೆ ಅ. 26ರಂದು ಬೆಳಗ್ಗೆ ಅಜೆಕಾರಿನಲ್ಲಿ ಸಂಭವಿಸಿದೆ. ಆಸೈ ತಂಬಿ (21) ಮೃತಪಟ್ಟವರು. ಇವರು ಕಳೆದ ಎರಡು ದಿನದ ಹಿಂದೆ ಉದ್ಯೋಗವನ್ನರಸಿ ಅಜೆಕಾರಿಗೆ ಬಂದಿದ್ದರು ಎನ್ನಲಾಗಿದೆ.

Advertisement

ಅಜೆಕಾರು ಗುಡ್ಡೆಯಂಗಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಇವರು ಕೆಲಸಕ್ಕೆ ಹೋಗಲೆಂದು ಮನೆಯ ಮುಂಭಾಗದಲ್ಲಿ ರಸ್ತೆ ಬದಿ ನಿಂತಿದ್ದರು. ಈ ವೇಳೆ ಹೆಬ್ರಿ ಮಾರ್ಗವಾಗಿ ಸಾಗುತ್ತಿದ್ದ ಗೂಡ್ಸ್ ವಾಹನ ತೀರಾ ಬಲಬದಿಗೆ ಬಂದು ರಸ್ತೆ ಬದಿ ನಿಂತಿದ್ದ ಆಸೈ ತಂಬಿ ಅವರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ಆಸೈ ತಂಬಿ ತೀವ್ರ ಗಾಯಗೊಂಡಿದ್ದು, ಪ್ರಜ್ಞಾ ಹೀನ ಸ್ಥಿತಿಯಲ್ಲಿದ್ದ ಅವರನ್ನು 108 ವಾಹನದಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಪರೀಕ್ಷಿಸಿದ ವೈದ್ಯರು ಅವರು  ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next