Advertisement
ಅಜೆಕಾರು ಪೇಟೆಯಲ್ಲಿರುವ ಈ ಶೌಚಾಲಯದಲ್ಲಿ ನೀರಿನ ವ್ಯವಸ್ಥೆ ಸೇರಿದಂತೆ ಮೂಲ ಸೌಕರ್ಯಗಳಿದ್ದರೂ ಸ್ವಚ್ಛ ತೆಯಲ್ಲಿ ಹಿಂದೆ ಬಿದ್ದಿದೆ.
ಶೌಚಾಲಯದ ಒಳಗೆ ಸ್ವಚ್ಛತೆ ಇಲ್ಲದೆ ದುರ್ವಾಸನೆಯಿಂದ ಕೂಡಿದೆ. ಜತೆಗೆ ಕಟ್ಟಡದ ಒಳಗೆ ಹಳೆಯ ಬಟ್ಟೆಗಳು, ಬಾಟಲಿಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಸಹ್ಯಕರವಾಗಿದೆ. ಶೌಚಾಲಯಕ್ಕೆ ಹೊಂದಿಕೊಂಡೇ ರಿಕ್ಷಾ ನಿಲ್ದಾಣವಿದ್ದು ಇದರ ದುರ್ವಾಸನೆ ಸಹಿಸಿಕೊಂಡೆ ಹೊಟ್ಟೆಪಾಡಿಗಾಗಿ ದಿನ ಕಳೆಯಬೇಕಾಗಿದೆ ಎಂಬುದು ರಿಕ್ಷಾ ಚಾಲಕ ಮಾಲಕರ ಅಳಲು.
Related Articles
Advertisement
ಮಹಿಳೆಯರಿಗೆ ಮುಜುಗರ ಅಜೆಕಾರು ಪೇಟೆಯಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಶೌಚಾಲಯ ಹಲವು ವರ್ಷಗಳ ಹಿಂದೆ ನಿರ್ಮಿಸಿದ್ದರೂ ಸಹ ಕೆಲ ವರ್ಷಗಳ ಹಿಂದೆ ಶೌಚಾಲಯದ ಸಮೀಪವೇ ರಿಕ್ಷಾ ತಂಗುದಾಣ ನಿರ್ಮಿಸಿರುವುದರಿಂದ ಮಹಿಳೆಯರು ಶೌಚಾಲಯಕ್ಕೆ ತೆರಳಲು ಮುಜುಗರಪಡುತ್ತಿದ್ದು ಶೌಚಾಲಯ ಇದ್ದೂ ಉಪಯೋಗಕ್ಕೆ ಬಾರದಂತಾಗಿದೆ ಎಂಬುದು ಮಹಿಳೆಯರ ಆರೋಪ. ನಾಗರಿಕರ ಸಹಕಾರ ಅಗತ್ಯ
ಸಾರ್ವಜನಿಕ ಶೌಚಾಲಯವನ್ನು ಉಪಯೋಗಿಸುವ ನಾಗರಿಕರು ಸಹ ಸ್ವಚ್ಛತೆ ಕಾಪಾಡುವಲ್ಲಿ ಮುತುವರ್ಜಿ ವಹಿಸ ಬೇಕಾಗಿದೆ. ಶೌಚಾಲಯ ಉಪಯೋಗಿಸಿದ ಅನಂತರ ಸೂಕ್ತವಾಗಿ ಸ್ವತ್ಛಗೊಳಿಸುವುದು ಪ್ರತಿಯೋರ್ವರ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ
ಸಾರ್ವಜನಿಕ ಶೌಚಾಲಯವು ಸ್ವಚ್ಛತೆಯ ಕೊರತೆಯಿಂದಾಗಿ ಪರಿಸರ ದುರ್ವಾಸನೆಯಿಂದ ಕೂಡಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಉಂಟಾಗಿದೆ. ಈ ದುರ್ವಾಸನೆಯಿಂದಾಗಿ ರಿಕ್ಷಾ ತಂಗುದಾಣದಲ್ಲಿ ರಿಕ್ಷಾ ಚಾಲಕ ಮಾಲಕರಿಗೆ ಸಮಸ್ಯೆ ಉಂಟಾಗುತ್ತಿದೆ.
– ಸಂದೇಶ್ ನಾಯಕ್, ರಿಕ್ಷಾ ಚಾಲಕ- ಮಾಲಕ