Advertisement

ಕಲಾಭಿಮಾನಿಗಳಿಗೆ ರಸದೌತಣ ನೀಡಿದ ಅಂಬಾ ಶಪಥ

03:57 PM Jul 19, 2017 | |

ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ವತಿಯಿಂದ ನಡೆದ ದ್ವಿತೀಯ ಹಂತದ ಸರಣಿ  ತಾಳಮದ್ದಳೆಯ ಮೂರನೇ ಕಾರ್ಯಕ್ರಮವು ಇತ್ತೀಚೆಗೆ ರಸಾಯಿನಿಯ ಎಚ್‌ಓಸಿ ಕಾಲನಿಯ ಶ್ರೀ ದುರ್ಗಾಮಾತಾ ಮಂದಿರದ ಸಭಾಗೃಹದಲ್ಲಿ ವೈಭವದಿಂದ ನಡೆಯಿತು. ರಸಾಯಿನಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಈ ಕಾರ್ಯಕ್ರಮವು ಜರಗಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು.

Advertisement

ಸಂಸ್ಥೆಯ ಅಧ್ಯಕ್ಷ ಮಹಾಬಲ ಟಿ. ಶೆಟ್ಟಿ ಅವರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ನಗರ ಸೇವಕ ಸಂತೋಷ್‌ ಶೆಟ್ಟಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. 

ಸಂಸ್ಥೆಯ ಪದಾಧಿಕಾರಿಗಳಾದ ಸುಧಾಕರ ಶೆಟ್ಟಿ, ಶಾಂತಾರಾಮ ಶೆಟ್ಟಿ, ರಾಮಕೃಷ್ಣ, ಯಾದವ ಸುವರ್ಣ, ರವೀಂದ್ರ ಆಳ್ವ, ಗಂಗಾಧರ ಆಳ್ವ, ಜಗನ್ನಾಥ ಶೆಟ್ಟಿ, ಸೂರಜ್‌ ಸುವರ್ಣ ಮೊದಲಾದವರು ಉಪಸ್ಥಿತರಿದ್ದು ತಂಡದ ಕಲಾವಿದರ ಪ್ರತಿಭೆಯನ್ನು  ಶ್ಲಾಘಿಸಿದರು.

ಅಜೆಕಾರು ಕಲಾಭಿಮಾನಿ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಅವರು ಅತಿಥಿಗಳನ್ನು ಗೌರವಿಸಿದರು. ರಸಾಯಿನಿ ಸಂಸ್ಥೆಯ ಪದಾಧಿಕಾರಿಗಳು ಕಲಾವಿದರುಗಳನ್ನು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ  “ಅಂಬಾ ಶಪಥ’ ತಾಳಮದ್ದಳೆ ಜರಗಿತು. ಹಿಮ್ಮೇಳದಲ್ಲಿ ಭಾಗವತರಾಗಿ ಕಾವ್ಯಶ್ರೀ ಆಜೇರು, ಶ್ರೀಪತಿ ನಾಯಕ್‌ ಆಜೇರು, ಪ್ರಶಾಂತ್‌ ಶೆಟ್ಟಿ ವಗೆನಾಡು ಅವರು ಸಹಕರಿಸಿದರು. ಕಾವ್ಯಶ್ರೀ ಆಜೇರು ಅವರ ಹಾಡುಗಾರಿಕೆಯು ಕಲಾಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಯಿತು.

ಅರ್ಥಗಾರಿಕೆಯಲ್ಲಿ ಭೀಷ್ಮನಾಗಿ ಪೆರ್ಮುದೆ ಜಯಪ್ರಕಾಶ್‌ ಶೆಟ್ಟಿ, ಪರಶುರಾಮನಾಗಿ ದಿನೇಶ್‌ ಶೆಟ್ಟಿ  ಕಾವಳಕಟ್ಟೆ, ಅಂಬೆಯಾಗಿ ಹರೀಶ್‌ ಬಳಂತಿ ಮೊಗರು, ಸಾಲ್ವನಾಗಿ ಪಕಳಕುಂಜ   ಶ್ಯಾಮ್‌ಭಟ್‌, ವೃದ್ಧ ಬ್ರಾಹ್ಮಣ ನಾಗಿ ಶೇಣಿ ವೇಣುಗೋಪಾಲ್‌ ಭಟ್‌ ಅವರ ಅರ್ಥಗಾರಿಕೆಯು ಒಬ್ಬರಿಂದೊಬ್ಬರನ್ನು ಮೀರಿಸುವಂತಿತ್ತು. 

Advertisement

ಚಂದ್ರಶೇಖರ ಶೆಟ್ಟಿ ಸ್ವಾಗತಿಸಿದರು. ಕಲಾವಿದ ಶೇಣಿ ವೇಣುಗೋಪಾಲ್‌ ಭಟ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ಅಜೆಕಾರು ಬಾಲಕೃಷ್ಣ ಶೆಟ್ಟಿ  ವಂದಿಸಿದರು. ಒಟ್ಟಿನಲ್ಲಿ ತಾಳಮದ್ದಳೆಯು ಪನ್ವೇಲ್‌ ಪರಿಸರದ ಕಲಾಭಿಮಾನಿಗಳಿಗೆ ಮಳೆ ಗಾಲದಲ್ಲಿ ರಸದೌತಣವನ್ನು ನೀಡಿತು.

Advertisement

Udayavani is now on Telegram. Click here to join our channel and stay updated with the latest news.

Next