Advertisement
ವಿಧಾನಸಭೆಯಲ್ಲಿನ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ| ಅಜಯಸಿಂಗ್ ಕೇಳಲಾದ ಪ್ರಶ್ನೆಗೆ ಸಚಿವರು ಲಿಖೀತವಾಗಿ ಉತ್ತರ ನೀಡಿದ್ದಾರೆ. ಈಗ ಜೇವರ್ಗಿತಾಲೂಕಿನಲ್ಲಿ ಮೂರು ಖರೀದಿ ಕೇಂದ್ರಗಳ ಮೂಲಕ ಖರೀದಿ ಮಾಡಲಾಗುತ್ತಿದೆ. ಜೇವರ್ಗಿ ತಾಲೂಕಿನಲ್ಲಿ ಹತ್ತಿ ಉತ್ಪನ್ನವನ್ನು ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿಸಲು ಈ ಬಾರಿ ಸಿದ್ದಾರ್ಥ ಫೈಬರ್ಸ್, ಮಂಜೀತ ಕಾಟನ್ ಮಿಲ್ ಮತ್ತು ಶ್ರೀ ಇಂಡಸ್ಟ್ರೀಸ್ ಜಿನ್ನಿಂಗ್ ಕಾರ್ಖಾನೆಗಳನ್ನು ಖರೀದಿ ಕೇಂದ್ರಗಳನ್ನಾಗಿಘೋಷಿಸಲಾಗಿದೆ. ಭಾರತೀಯ ಹತ್ತಿ ನಿಗಮದ ವತಿಯಿಂದ ಡಿ. 4ರ ಅಂತ್ಯಕ್ಕೆ 8,212 ಕ್ವಿಂಟಲ್ ಹತ್ತಿ ಖರೀದಿಸಲಾಗಿದೆ, ಖರೀದಿ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದರು.
Related Articles
Advertisement
ಹೊಸ ಸರ್ಕಾರಿ ತೋಟಗಾರಿಕಾ ಕ್ಷೇತ್ರ ನಿರ್ಮಿಸುವ ಪ್ರಸ್ತಾಪವಿಲ್ಲ :
ಕಲಬುರಗಿ: ಹೊಸ ಸರ್ಕಾರಿ ತೋಟಗಾರಿಕಾ ಕ್ಷೇತ್ರಗಳನ್ನು ನಿರ್ಮಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಪೌರಾಡಳಿತ ಹಾಗೂ ತೋಟಗಾರಿಕಾ ಸಚಿವ ನಾರಾಯಣಗೌಡ ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು,
ಕಲಬುರಗಿ-ಯಾದಗಿರಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ತೋಟಗಾರಿಕೆ ಅಭಿವೃದ್ಧಿಗೆ 274 ಲಕ್ಷ ರೂ. ಖರ್ಚು ಮಾಡಲಾಗಿದೆ. ಕಲಬುರಗಿ ಜಿಲ್ಲೆಯಲ್ಲಿ 182 ಲಕ್ಷ ಹಾಗೂ ಯಾದಗಿರಿ ಜಿಲ್ಲೆಯಲ್ಲಿ 92 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದು ವಿವರಣೆ ನೀಡಿದ್ದಾರೆ. 14 ಸರ್ಕಾರಿ ತೋಟಗಾರಿಕಾ ಕ್ಷೇತ್ರ ಮತ್ತು ನರ್ಸರಿಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಚಿತ್ತಾಪುರ ತಾಲೂಕಿನ ಗೋಳಾ ಕೆ, ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ, ಅಫಜಲಪುರ ತಾಲೂಕಿನ ಗುಡೂರ, ಆಳಂದ ತಾಲೂಕಿನ ಹಳ್ಳಿ ಸಲಗರ, ಸೇಡಂದಲ್ಲಿ ಕಚೇರಿ ನರ್ಸರಿ, ಕಲಬುರಗಿ ತಾಲೂಕಿನ ಕೆಸರಟಗಿ, ಬಡೆಪುರ, ಮಾಲಗತ್ತಿ, ಕಲ್ಲಹಂಗರಗಾ, ಯಾದಗಿರಿ ತಾಲೂಕಿನ ಹತ್ತಿಕುಣಿ, ಹುಣಸಗಿ ತಾಲೂಕಿನ ನಾರಾಯಣಪುರ, ಯಾದಗಿರಿ ಹಾಗೂ ಸುರಪುರ ಕಚೇರಿ ನರ್ಸರಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.