ಮುಂಬೈ: ಬಾಲಿವುಡ್ ಆ್ಯಕ್ಷನ್ ಹೀರೋ ಅಜಯ್ ದೇವ್ ಗನ್ ಸಹೋದರ ಅನಿಲ್ ದೇವ್ ಗನ್ (45) ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ. ತನ್ನ ಸಹೋದರ ಅಗಲಿರುವ ಬಗ್ಗೆ ಅಜಯ್ ದೇವಗನ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟಪಡಿಸಿದ್ದಾರೆ.
ಸೋಮವಾರ (ಅಕ್ಟೋಬರ್ 05) ರಾತ್ರಿ ನಾನು ನನ್ನ ಸಹೋದರನನ್ನು ಕಳೆದುಕೊಂಡಿದ್ದೇನೆ. ಈತನ ಆಕಸ್ಮಿಕ ಅಗಲಿಕೆಯಿಂದ ನಮ್ಮ ಕುಟುಂಬದ ಎದೆಗುಂದಿಸಿದೆ. ಆತನನ್ನು ನಾನು ಕಳೆದುಕೊಂಡಿದ್ದೇನೆ.ಆತನ ಆತ್ಮಕ್ಕೆ ಶಾಂತಿ ಸಿಗುವಂತೆ ಪ್ರಾರ್ಥಿಸಿ. ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಯಾವುದೇ ಪ್ರಾರ್ಥನೆ, ಇನ್ನಿತರ ಕಾರ್ಯಕ್ರಮ ನಡೆಯುವುದಿಲ್ಲ ಎಂದು ಅಜಯ್ ಟ್ವೀಟ್ ಮಾಡಿದ್ದಾರೆ.
ಸಹೋದರನ ನಿಧನದ ಬಗ್ಗೆ ಟ್ವೀಟ್ ಮಾಡುತ್ತಿದ್ದಂತೆಯೇ ಅಜಯ್ ಅವರ ಅಭಿಮಾನಿಗಳು, ಸಿನಿಮಾರಂಗದ ಸ್ನೇಹಿತರು ಸಾಂತ್ವಾನ ಹೇಳಿದ್ದಾರೆ. ಅನಿಲ್ ದೇವ್ ಗನ್ ನಿಧನಕ್ಕೆ ಅಭಿಷೇಕ್ ಬಚ್ಚನ್, ಮುಖೇಶ್ ಛಾಬ್ರಾ ಸೇರಿದಂತೆ ಹಲವು ನಟ, ನಟಿಯರು ಸಂತಾಪ ವ್ಯಕ್ತಪಡಿಸಿದ್ದಾರೆ.
ಅನಿಲ್ ದೇವ್ ಗನ್ ಅವರು ಬಾಲಿವುಡ್ ನ ರಾಜು ಚಾಚಾ ಮತ್ತು ಬ್ಲ್ಯಾಕ್ ಮೇಲ್ ಸಿನಿಮಾಗಳನ್ನು ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಅಜಯ್ ದೇವ್ ಗನ್ ಹೀರೋ ಆಗಿದ್ದರು. 1996ರಲ್ಲಿ ಜೀತ್ ಸಿನಿಮಾದ ಸಹಾಯಕ ನಿರ್ದೇಶಕರಾಗುವ ಮೂಲಕ ವೃತ್ತಿ ಜೀವನ ಆರಂಭಿಸಿದ್ದರು.