Advertisement

AJ Institute Of Management: ಎಂಬಿಎ ಪದವಿ ಪ್ರದಾನ

12:46 AM Aug 16, 2023 | Team Udayavani |

ಮಂಗಳೂರು: ನಗರದ ಲಕ್ಷೀ ಮೆಮೋರಿಯಲ್‌ ಎಜುಕೇಶನ್‌ ಟ್ರಸ್ಟ್‌ (ಎಲ್‌.ಎಂ.ಇ.ಟಿ)ಇದರ ಅಂಗ ಸಂಸ್ಥೆಯಾದ ಎ.ಜೆ. ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ ಪದವಿ ಪ್ರದಾನ ಸಮಾರಂಭ ನೆರವೇರಿತು.

Advertisement

ಮುಖ್ಯ ಅತಿಥಿಯಾಗಿದ್ದ ಅಡ್ಜ್ವರ್ವ್‌ ಬೆಂಗಳೂರಿನ ಹಿರಿಯ ನಿರ್ದೇಶಕ ರಾಜೇಶ್ವರ ರಾವ್‌ ಮಾತನಾಡಿ, ಇಂದಿನ ವಿದ್ಯಾರ್ಥಿಗಳು ವೃತ್ತಿ ಜೀವನದಲ್ಲಿ ಯಶಸ್ಸು ಕಾಣುವುದಕ್ಕೆ ಚುರುಕುತನ, ಶ್ರದ್ಧೆ ಮತ್ತು ಸರಳತೆ ಈ ಮೂರು ಮುಖ್ಯ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದರು.

ಎಂಬಿಎ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ನೆರವೇರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಆಡಳಿತ ಮಂಡಳಿಯ ನಿರ್ದೇಶಕಿ ಆಶ್ರಿತ ಪಿ. ಶೆಟ್ಟಿ ಅವರು ವಿದ್ಯಾರ್ಥಿಗಳು ಜ್ಞಾನ ಮತ್ತು ಕೌಶಲ ಬಳಸಿ ಉತ್ತಮ ಉದ್ದೇಶಗಳೊಂದಿಗೆ ಕಾರ್ಯನಿರ್ವಹಿಸಿ ಸಮಾಜದಲ್ಲಿ ಸತøಜೆಗಳಾಗಿ ಬಾಳಬೇಕೆಂದರು.

ಪ್ರಾಂಶುಪಾಲ ಡಾ| ವಿಜಯಕುಮಾರ್‌, ಅಕಾಡೆಮಿಕ್‌ ಡೀನ್‌ ಡಾ| ಸ್ವಪ್ನಾ ಶೆಟ್ಟಿ, ವಿದ್ಯಾರ್ಥಿ ಸಂಘದ ಸಲಹೆಗಾರ ಪ್ರೊ| ಚೇತನ್‌ ಕುಮಾರ್‌ ಉಪಸ್ಥಿತರಿದ್ದರು. ನಿರ್ದೇಶಕ ಡಾ| ಟಿ. ಜಯಪ್ರಕಾಶ್‌ ರಾವ್‌ ಸ್ವಾಗತಿಸಿ, ಡಾ| ಸ್ವಪ್ನಾ ಶೆಟ್ಟಿ ವಂದಿಸಿದರು. ವಿದ್ಯಾರ್ಥಿಗಳಾದ ಗೌತಮಿ ರೈ ಮತ್ತು ಹರ್ಷಾನಂದ ಭಕ್ತ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next