ಮಹಾನಗರ: ಎ.ಜೆ. ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾ ವಿದ್ಯಾಲಯದ ಸಿವಿಲ್ ಎಂಜಿನಿಯರಿಂಗ್ ವಿಭಾಗದ ವತಿಯಿಂದ ‘ಅಪ್ಲಿಕೇಷನ್ಸ್ ಆಫ್ ರಿಮೋಟ್ ಸೆನ್ಸಿಂಗ್ ಆ್ಯಂಡ್ ಜಿ.ಐ.ಎಸ್. ಇನ್ ಸಿವಿಲ್ ಎಂಜಿನಿಯರಿಂಗ್’ ಎಂಬ ವಿಷಯದ ಕುರಿತು 2 ದಿನಗಳ ರಾಷ್ಟ್ರಮಟ್ಟದ ಕಾರ್ಯಾಗಾರವು ನಡೆಯಿತು. ಕಾರ್ಯಾಗಾರವನ್ನು ಡಿಪಾರ್ಟ್ ಮೆಂಟ್ ಆಫ್‌ಒಶ್ಯನ್ ರಿಸರ್ಚ್ ಮಿನಿಷ್ಟರಿ ಆಫ್ ಅರ್ಥ್ ಸೈನ್ಸಸ್ ಗವರ್ನ್ಮೆಂಟ್ ಆಫ್ ಇಂಡಿಯಾ ಇದರ ವಿಜ್ಞಾನಿ ಡಾ| ಅವಿನಾಶ್‌ಕುಮಾರ್ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಇಂದಿನ ಮತ್ತು ಮುಂದಿನ ಜನತೆಗೆ ದೂರ ಸಂವೇದನೆ ಭೌಗೋಳಿಕ ವ್ಯವಸ್ಥೆಯ ಬಳಕೆ ಮತ್ತು ಪ್ರಾಮುಖ್ಯತೆಯ ಬಗ್ಗೆ ತಿಳಿಸಿದರು. ಪ್ರಾಂಶುಪಾಲ ಡಾ| ಶಾಂತಾರಾಮ ರೈ ಸಿ. ಅವರು ಮಾತನಾಡಿ, ತಾಂತ್ರಿಕ ಶಿಕ್ಷಣದ ಜತೆಗೆ ಪ್ರಾಯೋಗಿಕ ಜ್ಞಾನ ಸಂಪಾದನೆ ಕೂಡ ಅಗತ್ಯ ಹಾಗೂ ಕಾರ್ಯಾಗಾರದ
ಉದ್ದೇಶ ಮತ್ತು ಆದ್ಯತೆಗಳ ಬಗ್ಗೆ ವಿವರಿಸಿದರು.
ಸಂಪನ್ಮೂಲ ವ್ಯಕ್ತಿಗಳಾದ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ನ ಪ್ರೊ| ಡಾ| ಶ್ರೀನಿವಾಸ್, ಮೈಸೂರಿನ ಎನ್‌ಐಇನ ಪ್ರೊ| ಡಾ| ಗಣೇಶ್ ಪ್ರಸಾದ್, ಮಂಗಳೂರು ವಿಶ್ವ ವಿದ್ಯಾನಿಲಯದ ಪ್ರೊ| ಡಾ| ಗಂಗಾಧರ್ ಭಟ್, ಎನ್‌ಐಟಿಕೆ ಪ್ರೊ| ಡಾ| ದ್ವಾರಕೇಶ್ ಜಿ.ಎಸ್., ಮಂಗಳೂರು ವಿಶ್ವ ವಿದ್ಯಾನಿಲಯದ ಹಿರಿಯ ಸಂಶೋಧನ ವಿದ್ಯಾರ್ಥಿ ಆತಿಥ್ ಶೆಟ್ಟಿ ಪ್ರಾಯೋಗಿಕ ಮತ್ತು ಉಪನ್ಯಾಸ ತರಬೇತಿ ನೀಡಿದರು. ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥೆ ಡಾ| ಅಕ್ಷತಾ ಶಟ್ಟಿ ಸ್ವಾಗತಿಸಿ, ಉಪನ್ಯಾಸಕಿ ಮಧುಶ್ರೀ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕಿ ದೀಕ್ಷಾ ಆನಂದ್ ನಿರೂಪಿಸಿ, ಉಪನ್ಯಾಸಕ ನಿಖೀಲ್ ಎನ್. ವಂದಿಸಿದರು.
ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿ
ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮೀ ಮೆಮೋರಿಯಲ್‌ಎಜುಕೇಶನ್ ಟ್ರಸ್ಟ್ ನಿರ್ದೇಶಕಿ ಆಶ್ರಿತಾ ಪ್ರಶಾಂತ್ ಶೆಟ್ಟಿ ಮಾತನಾಡಿ,
ಶಿಕ್ಷಣದ ಜತೆಗೆ ಸಂಶೋಧನೆಗೆ ಪ್ರಾಮುಖ್ಯ ನೀಡಬೇಕು. ಈ ಕಾರ್ಯಾಗಾರವು ವಿದ್ಯಾರ್ಥಿಗಳ ಜ್ಞಾನಾಭಿವೃದ್ಧಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಸಹಕಾರಿಯಾಗಲಿದೆ ಎಂದರು.