Advertisement

ದುಬೈಯಲ್ಲಿ ಅಯ್ಯೋ ಶೃದ್ಧಾ ಹಾಸ್ಯ ಕಾರ್ಯಕ್ರಮ: ನಗೆಗಡಲಲ್ಲಿ ತೇಲಾಡಿದ ಪ್ರೇಕ್ಷಕರು

12:53 PM May 29, 2024 | Nagendra Trasi |

ದುಬೈ: ಅರಬ್‌ ಸಂಯುಕ್ತ ಸಂಸ್ಥಾನದ ಗಿನ್ನೆಸ್‌ ದಾಖಲೆಗಳ ನಗರ ಎಂದೇ ಪ್ರಖ್ಯಾತಿಯನ್ನು ಪಡೆದಿರುವ ವಾಣಿಜ್ಯ ನಗರಿ ದುಬೈ ಮೇ 18ರಂದು ಇಂಡಿಯನ್‌ ಹೈಸ್ಕೂಲ್‌ ದುಬೈ ಶೇಖ್‌ ರಾಶೀದ್‌ ಆಡಿಟೋರಿಯಂನಲ್ಲಿ ಅನಿವಾಸಿ ಭಾರತೀಯ ಪ್ರೇಕ್ಷಕರ ನಗೆ ಸ್ಫೋಟಗೊಂಡು ಮರಳು ನಾಡಿನಲ್ಲಿ ಪ್ರತಿಧ್ವನಿಸಿದೆ.

Advertisement

“ಅಯ್ಯೋ ಸೋ ಮಿನಿ ಥಿಂಗ್ಸ್‌ ವಿತ್‌ ಶೃದ್ಧಾ ಜೈನ್‌ ಎ ಸ್ಟ್ಯಾಂಡ್‌ ಅಪ್‌ ಶೋ’ ನ ಪೋಸ್ಟರ್‌ ಎಲ್ಲರ ಮೊಬೈಲ್‌ನಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತಿತ್ತು. ಬಹು ದಿನಗಳಿಂದ ಕಾತರದಿಂದ ನಿರೀಕ್ಷೆಯಲ್ಲಿದ್ದ ಯುಎಇ ಜನತೆಗೆ ಮೇ 18ರ ಸಂಜೆ 7.30ಕ್ಕೆ ವೇದಿಕೆಯ ಮೇಲೆ ಅಯ್ಯೋ ಶೃದ್ಧಾ ಪ್ರತ್ಯಕ್ಷವಾದಂತೆ ಕಡು ಕೆಂಪು, ಕಪ್ಪು ವಸ್ತ್ರಧಾರಿಣಿಯ ಕೋಲಿ¾ಂಚು ಮೂಡಿಸಿದ ಅನುಭವ. ಪ್ರಾರಂಭದ ಕ್ಷಣದಿಂದ ಕೊನೆಯವರೆಗೂ ಶೃದ್ಧಾಳ ಅರ್ಥಪೂರ್ಣ ನವಿರಾದ ಹಾಸ್ಯ ಮಾಲೆ ಪಟಾಕಿಯಂತೆ ಸಿಡಿಯುತಿದ್ದಂತೆ ಪ್ರೇಕ್ಷಕರ ನಗೆ, ಚಪ್ಪಾಳೆ ಹರ್ಷೋದ್ಘಾರ ಕ್ಷಣಕ್ಷಣ ಮುಗಿಲು ಮುಟ್ಟಿದ್ದು ಶೇಕ್‌ ರಾಶೀದ್‌ ಆಡಿಟೋರಿಯಂನಲ್ಲಿ ಹಿಂದೆಂದೂ ನಾವು ನೋಡಿರಲಿಲ್ಲ.

ನಮ್ಮ ದಿನ ನಿತ್ಯ ಜೀವನದ ಅತ್ಯಂತ ಅಮೂಲ್ಯವಾದ ಅವಿಸ್ಮರಣೀಯ ಕ್ಷಣಗಳನ್ನು ಅರ್ಥಗರ್ಭಿತವಾಗಿ ಪ್ರೇಕ್ಷಕರ ಮುಂದೆ ಬಿಚ್ಚಿಟ್ಟಿದ್ದು ಹಾಸ್ಯ ಲೇಪನವಾಗಿಸಿ ಮುಟ್ಟಿಸುವಲ್ಲಿ ಅಯ್ಯೋ ಶ್ರದ್ಧಾ ಜನ ಮನಸೆಳೆದು ಒಂದು ಐತಿಹಾಸಿಕ ದಾಖಲೆಯನ್ನು ದುಬೈಯ ಪ್ರತಿಷ್ಠಿತ ವೇದಿಕೆಯಲ್ಲಿ ಸಾಕ್ಷೀಕರಿಸಿರುವುದು ಇದೇ ಪ್ರಥಮ.

ಬೆಂಗಳೂರಿನ ಲೈವ್‌ ಟ್ರೀ ಎಂಟರ್ಟೈನ್‌ ಮೆಂಟ್‌ನ ನಿರ್ದೇಶಕ ಶೀಕರ್‌ ಕೆ. ವಿ. ಮತ್ತು ಶರತ್‌ ವತ್ಸಾ ಆಯೋಜನೆಯಲ್ಲಿ ಪ್ಲಾಟಿನಂ ಟಿಕೆಟ್ಸ್‌ ಪ್ಲಾಟ್‌ ಫಾರಂನಲ್ಲಿ ಮುಂಗಡ ಬುಕ್ಕಿಂಗ್‌ನಲ್ಲಿ ಟಿಕೆಟ್‌ಗಳು ಪೂರ್ತಿಯಾಗಿ ಮಾರಾಟವಾಗಿ ಸಭಾಂಗಣ ಪೂರ್ತಿಯಾಗಿ ಭರ್ತಿಯಾಗಿದ್ದು ಒಂದು ಅಭೂತಪೂರ್ವ ಕಾರ್ಯಕ್ರಮಕ್ಕೆ ದುಬೈಯ ಶೇಖ್‌ ರಾಶೀದ್‌ ಆಡಿಟೋರಿಯಂ ಸಾಕ್ಷಿಯಾಯಿತು.

ವರದಿ: ಬಿ. ಕೆ. ಗಣೇಶ್‌ ರೈ, ದುಬೈ

Advertisement
Advertisement

Udayavani is now on Telegram. Click here to join our channel and stay updated with the latest news.

Next