ಕಡಬ :ಐತ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ದ ಅವಿಶ್ವಾಸ ನಿರ್ಣಯದ ಕುರಿತು ಪುತ್ತೂರು ಸಹಾಯಕ ಆಯುಕ್ತರ ನೇತೃತ್ವದ ಗೊತ್ತುವಳಿ ಸಭೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಐತ್ತೂರು ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲ ವಿರುದ್ದ ಉಪಾಧ್ಯಕ್ಷ ರ ಸಹಿತ 9 ಸದಸ್ಯರು ಅವಿಶ್ವಾಸ ಮಂಡಿಸಿದ್ದು ಪುತ್ತೂರು ಎ.ಸಿ.ಯವರಿಂದ ಅವಿಶ್ವಾಸ ಗೊತ್ತುವಳಿ ಸಭೆ ಪ್ರಾರಂಭವಾದ ಕೂಡಲೇ ಅಧ್ಯಕ್ಷರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದು ಈ ಹಿನ್ನೆಲೆಯಲ್ಲಿ ಅಧ್ಯಕ್ಷ ರ ವಿರುದ್ದ ಅವಿಶ್ವಾಸ ಗೊತ್ತುವಳಿ ಸಭೆ ರದ್ದುಗೊಂಡಿದೆ.
ಹಲವು ವಿವಾದಗಳ ಕೇಂದ್ರ ಬಿಂದುವಾಗಿ ಸದಾ ಸುದ್ದಿಯಲ್ಲಿರುವ ಐತ್ತೂರು ಗ್ರಾ.ಪಂ.ನಲ್ಲಿ ಅಧ್ಯಕ್ಷರ ವಿರುದ್ದ ವೇ ಉಪಾಧ್ಯಕ್ಷ ರ ಸಹಿತ ಆರು ಮಂದಿ ಸದಸ್ಯ ರು ಅವಿಶ್ವಾಸ ನಿರ್ಣಯ ಎ.ಸಿ.ಯವರಿಗೆ ಸಲ್ಲಿಸಿದ್ದರು. ಈ ಸಂಬಂಧ ಅವಿಶ್ವಾಸ ಗೊತ್ತುವಳಿ ಸಭೆಯು ಐತ್ತೂರು ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ನಿಗದಿಯಾಗಿತ್ತು.
ಒಟ್ಟು 11 ಸದಸ್ಯ ಬಲದ ಪಂಚಾಯಿತಿಯಲ್ಲಿ ಆರು ಜನ ಬಿಜೆಪಿ ಬೆಂಬಲಿತ ಸದಸ್ಯರು ಮತ್ತು ಐದು ಜನ ಕಾಂಗ್ರೆಸ್ ಬೆಂಬಲಿತ ಸದಸ್ಯರು ಇದ್ದಾರೆ. ಅಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಸ್ಥಾನಕ್ಕೆ ನಿಗದಿಯಾಗಿದ್ದು ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯೆ ಶ್ಯಾಮಲ ಅವರಿಗೆ ಅದೃಷ್ಟ ಒಲಿದು ಬಂದಿತ್ತು. ಆದರೆ ಬಳಿಕದ ಬೆಳವಣಿಗೆಯಲ್ಲಿ ಅಧ್ಯಕ್ಷರ ವಿರುದ್ದ ಹೆಚ್ಚಿನ ಸದಸ್ಯ ರಿಗೆ ಕೆಲವೊಂದು ವಿಚಾರದಲ್ಲಿ ಅವಿಶ್ವಾಸ ಮೂಡಿತ್ತು. ಈ ಸಮಸ್ಯೆಯು ತಲ ಮಟ್ಟದಲ್ಲಿ ಇತ್ಯರ್ಥವಾಗದೆ ಇರುವುದರಿಂದ ಇಂದು ಅವಿಶ್ವಾಸ ಮಂಡನೆ ಹಂತಕ್ಕೆ ತಲುಪಿತ್ತು.
ಬಿಜೆಪಿ ಬೆಂಬಲಿತ ಆರು ಸದಸ್ಯರಿಗೆ ಕಾಂಗ್ರೆಸ್ ಬೆಂಬಲಿತ ಎರಡು ಅಥವಾ ಮೂರು ಸದಸ್ಯರು ಬೆಂಬಲ ನೀಡಿರುವುದರಿಂದ ಅಧ್ಯಕ್ಷರು ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವುದು ಬಹುತೇಕ ಖಚಿತವಾಗಿತ್ತು.
ಕಾಂಗ್ರೆಸ್ ನ ಇಬ್ಬರು ಅಥವಾ ಮೂವರು ಸದಸ್ಯರು ಬಿಜೆಪಿ ಬೆಂಬಲಿತ ಸದಸ್ಯರಿಗೆ ಬೆಂಬಲ ನೀಡಿರುವುದರಿಂದ ಸಹಜವಾಗಿ ಪಕ್ಷ ರಾಜಕೀಯ ಚದುರಂಗದಾಟ ಶುರುವಾಗಿತ್ತು , ರಾಜಕೀಯ ರಂಗೇರಿತ್ತು.. ಈಗಾಗಲೇ ಹೆಚ್ವಿನ ಸದಸ್ಯರು ಗುಪ್ತ ಜಾಗದಲ್ಲಿ ಇದ್ದು ಸಭೆಗೆ ಒಟ್ಟಿಗೆ ಬಂದು ಹಾಜರಾಗಲಿದ್ದಾರೆ ಎನ್ನುವ ಮಾಹಿತಿ ಇತ್ತು. . ಕಳೆದೆರಡು ದಿಗಳಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಮುಖಂಡರು ಸಭೆಗಳ ಮೇಲೆ ಸಭೆ ನಡೆಸುತ್ತಿದ್ದರು.
ಈ ಎಲ್ಲಾ ಬೆಳವಣಿಗೆಯ ಹಿನ್ನೆಯಲ್ಲಿ ಅಧ್ಯಕ್ಚರ ಪದಚ್ಯುತಿ ಖಚಿತ ಎಂದು ಬಲವಾಗಿ ನಂಬಲಾಗಿತ್ತು ಆದರೆ ಈಗ ಎಲ್ಲಾ ಉಲ್ಟಾಪಲ್ಟ ಆಗಿದೆ. ಅಧ್ಯಕ್ಷರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದರಿಂದ ರಾಜಕೀಯ ಹೈಡ್ರಾಮಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.