ಚೆನ್ನೈ: ಕಳೆದ ಕೆಲ ವರ್ಷಗಳಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದ ನಟ ಧನುಷ್ ಹಾಗೂ ಐಶ್ವರ್ಯಾ ರಜಿನಿಕಾಂತ್ ಅವರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಮೂಲಗಳು ಹೇಳಿರುವುದಾಗಿ ʼಇಂಡಿಯಾ ಟುಡೆʼ ವರದಿ ತಿಳಿಸಿದೆ.
ನಿರ್ದೇಶಕಿ ಐಶ್ವರ್ಯಾ ರಜಿನಿಕಾಂತ್ ಮತ್ತು ನಟ-ನಿರ್ದೇಶಕ ಧನುಷ್ ಇತ್ತೀಚೆಗೆ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿ ತಿಳಿಸಿದೆ.
ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ – ಸೆಕ್ಷನ್ 13 ಬಿ ಅಡಿಯಲ್ಲಿ ಅವರು ಅರ್ಜಿ ಸಲ್ಲಿಸಿದ್ದಾರೆ ಎಂದು ದಂಪತಿಗಳ ನಿಕಟ ಮೂಲಗಳು ಹೇಳಿರುವುದಾಗಿ ಇಂಡಿಯಾ ಟುಡೇ.ಇನ್ ವರದಿ ಮಾಡಿದೆ.
2022ರ ಜನವರಿಯಲ್ಲಿ ಧನುಷ್ – ಐಶ್ವರ್ಯಾ ತಾವು ದೂರುವಾಗುವುದಾಗಿ ಹೇಳಿದ್ದರು. 18 ವರ್ಷಗಳ ದಾಂಪತ್ಯ ಜೀವನದಿಂದ ಪ್ರತ್ಯೇಕವಾಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಚಾರವನ್ನು ಹಂಚಿಕೊಂಡಿದ್ದರು.
ಇದೀಗ ಸುಮಾರು ಒಂದೂವರೆ ವರ್ಷದ ನಂತರ ಇಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಅವರ ಪ್ರಕರಣದ ವಿಚಾರಣೆ ನಡೆಯಲಿದೆ ಎಂದು ವರದಿ ತಿಳಿಸಿದೆ.
ಪ್ರತ್ಯೇಕವಾಗಿ ಇರುವುದಾಗಿ ಎಂದು ಘೋಷಿಸಿದ ಬಳಿಕ ಇಬ್ಬರು ತಮ್ಮ ಮಕ್ಕಳಾದ ಯಾತ್ರಾ ಮತ್ತು ಲಿಂಗಾ ಅವರ ಶಾಲೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದರು.
ಧನುಷ್ ಮತ್ತು ಐಶ್ವರ್ಯಾ ಅವರು 2004 ರಲ್ಲಿ ಅದ್ಧೂರಿ ವಿವಾಹದಲ್ಲಿ ವಿವಾಹವಾಗಿದ್ದರು.