Advertisement

Kollywood: ಧನುಷ್‌ – ಐಶ್ವರ್ಯಾ ವಿಚ್ಚೇದನ ಪ್ರಕರಣ; ನ.27ಕ್ಕೆ ಅಂತಿಮ ತೀರ್ಪು

03:45 PM Nov 21, 2024 | Team Udayavani |

ಚೆನ್ನೈ: ಕಾಲಿವುಡ್‌ ನಟ ಧನುಷ್‌ (Dhanush) – ಐಶ್ವರ್ಯಾ ರಜನಿಕಾಂತ್ (Aishwarya Rajinikanth) ವಿಚ್ಚೇದನ (Divorce) ಅರ್ಜಿ ವಿಚಾರಣೆಗೆ ಗುರುವಾರ (ನ.21ರಂದು) ಚೆನ್ನೈನ ಕೌಟುಂಬಿಕ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

Advertisement

ಧನುಷ್‌ – ಐಶ್ವರ್ಯಾ 2022ರಲ್ಲಿ ದಾಂಪತ್ಯ ಜೀವನಕ್ಕೆ ವಿಚ್ಚೇದನ ಘೋಷಿಸಿದ್ದರು. ಈ ಸಂಬಂಧ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಅರ್ಜಿ ಸಲ್ಲಿಸಿದ್ದ ಬಳಿಕ ಇಬ್ಬರು ವಿಚಾರಣೆಗೆ ಹಾಜರಾಗಿರಲಿಲ್ಲ. ಮುನಿಸು ಮರೆತು ಮಕ್ಕಳಿಗಾಗಿ ಧನುಷ್‌ – ಐಶ್ವರ್ಯಾ ಅವರು ಒಂದಾಗುತ್ತಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು.

ಇದನ್ನೂ ಓದಿ: Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

ವಿಚ್ಛೇದನದ ಬಳಿಕ ಇಬ್ಬರು ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಮಕ್ಕಳಿಗಾಗಿ ಜತೆಯಾಗಿ ಬಾಳಿ ಎಂದು ಎರಡೂ ಕುಟುಂಬದ ಹಿರಿಯರು ಅನೇಕ ಬಾರಿ ರಾಜಿ-ಪಂಚಾಯಿತಿ ಮಾಡಿದ್ದರು. ಇದೆಲ್ಲದರ ಹೊರತಾಗಿಯೂ ಧನುಷ್‌ – ಐಶ್ವರ್ಯಾ ದಾಂಪತ್ಯದಲ್ಲಿ ಬಿರುಕು ಮತ್ತಷ್ಟು ಹೆಚ್ಚಾಗಿದೆ.

Advertisement

ಇಷ್ಟು ದಿನ ವಿಚ್ಚೇದನ ಅರ್ಜಿ ವಿಚಾರಣೆಗೆ ಹಾಜರಾಗಾದ ಧನುಷ್‌ – ಐಶ್ವರ್ಯಾ ಮೊದಲ ಬಾರಿಗೆ ಫ್ಯಾಮಿಲಿ ಕೋರ್ಟಿಗೆ ಬಂದಿದ್ದಾರೆ. ನ್ಯಾಯಧೀಶರು ಎರಡು ಕಡೆಯ ವಾದವನ್ನು ಆಲಿಸಿ ವಿಚಾರಣೆಯನ್ನು ನವೆಂಬರ್ 27ಕ್ಕೆ ಮುಂದೂಡಿದಿದ್ದಾರೆ. ಅದೇ ದಿನ ಅಂತಿಮ ತೀರ್ಪು ಪ್ರಕಟವಾಗಲಿದೆ ಎಂದು ವರದಿಯಾಗಿದೆ.

ಧನುಷ್‌ – ಐಶ್ವರ್ಯಾ ಕೋರ್ಟಿಗೆ ಹಾಜರಾಗುವ ವೇಳೆ ಮಾಸ್ಕ್‌ ಹಾಕಿಕೊಂಡು ಬಂದಿರುವ ವಿಡಿಯೋ ವೈರಲ್‌ ಆಗಿದೆ.

ಧನುಷ್- ಐಶ್ವರ್ಯಾ ರಜನಿಕಾಂತ್ ಪರಸ್ಪರ ಪ್ರೀತಿಸಿ 2004ರಲ್ಲಿ ಮದುವೆಯಾದರು. ಅವರಿಗೆ ಲಿಂಗ ಮತ್ತು ಯಾತ್ರಾ ಎಂಬ ಇಬ್ಬರು ಪುತ್ರರು ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next