Advertisement

ಐಶು ವಿತ್‌ ಮಾದೇಶ ಟೈಟಲ್‌ ಬಿಡುಗಡೆ

07:17 PM Nov 09, 2022 | Team Udayavani |

ಬಹುತೇಕ ಹೊಸಬರೇ ಸೇರಿಕೊಂಡು ಸಿದ್ದಪಡಿಸಿರುವ “ಐಶು ವಿತ್‌ ಮಾದೇಶ’ ಚಿತ್ರದ ಶೀರ್ಷಿಕೆ ಇತ್ತೀಚೆಗೆ ಬಿಡುಗಡೆಯಾಗಿದೆ. ಬಾಲಕೃಷ್ಣ ಬರಗೂರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಬಿಜಾಪುರ ಮೂಲದ ವಿಶಾಲ್‌ ಕೃಷ್ಣ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುವ ಜತೆಗೆ ನಾಯಕನಾಗಿ ಅಭಿನಯಿಸಿದ್ದಾರೆ. ‌

Advertisement

ಇಲ್ಲಿಯವರೆಗೆ ಹಲವು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಶ್ರಯಾರಾಮ್‌ ಈ ಚಿತ್ರದಲ್ಲಿ ನಾಯಕಿ ಯಾಗಿ ಅಭಿನಯಿಸುತ್ತಿದ್ದಾರೆ. ಇವರೊಂದಿಗೆ ಕುರಿಸುನಿಲ್, ಅನ್ನಪೂರ್ಣ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ಚೆಲುವಿನ ಚಿತ್ತಾರ’ ಚಿತ್ರದ ಮುಖ್ಯ ಪಾತ್ರದ ಹೆಸರುಗಳು ಇದೇ ಟೈಟಲ್‌ ಆಗಿತ್ತು. ಹಾಗಂತ ಈ ಸಿನಿಮಾಕ್ಕೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಸಿನಿಮಾದ ಕಥೆಗೆ ಸೂಕ್ತ ಅನಿಸಿದ್ದರಿಂದ “ಐಶು ವಿತ್‌ ಮಾದೇಶ’ ಎಂಬುದನ್ನೆ ಟೈಟಲ್‌ ಆಗಿ ಇಡಲಾಗಿದೆ.

ಇದೇ ಹೆಸರನ್ನು ಯಾತಕ್ಕಾಗಿ ಇಡಲಾಗಿದೆ ಎಂಬುದು ಸಿನಿಮಾ ನೋಡಿದರೆ ತಿಳಿಯುತ್ತದೆ. ಅಪ್ಪನ ಆಸೆ ಈಡೇರಿಸಲು ಮಗನಾದವನು ಒಂದು ರಿಸ್ಕ್ ಗೆ ಕೈ ಹಾಕುತ್ತಾನೆ. ಅದು ಏನು? ಆ ರಿಸ್ಕ್ನಿಂದ ಅವನ ಜೀವನ ಏನಾಗುತ್ತೆ? ಎನ್ನುವುದೇ ಸಿನಿಮಾ. ಥಿಯೇಟರ್‌ನಿಂದ ಹೊರಬಂದಾಗ ಈ ತರಹದ ಪ್ರೀತಿ ಇರುತ್ತದಾ ಎಂಬ ಪ್ರಶ್ನೆ ನೋಡುಗರನ್ನು ಕಾಡುತ್ತದೆ. ಪ್ರೀತಿಯ ಅಂಶಗಳನ್ನು ವಿಭಿನ್ನವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ’ ಎನ್ನುವುದು ಸಿನಿಮಾದ ನಾಯಕ ನಟ ಕಂ ನಿರ್ದೇಶಕ ವಿಶಾಲ್‌ ಕೃಷ್ಣ ಮಾತು. ‌

ಗೌತಮ್ಯಾನ ಸಾಹಿತ್ಯದ ಮೂರು ಹಾಡುಗಳಿಗೆ ಕಾರ್ತಿಕ್‌ ವೆಂಕಟೇಶ್‌ ಸಂಗೀತ ಸಂಯೋಜಿಸಿದ್ದಾರೆ. ಛಾಯಾಗ್ರಹಣ ಅಭಿ-ಮಂಜನಾಥ, ಸಂಕಲನ ಅಯುರ್‌ ಸ್ವಾಮಿ, ಸಾಹಸ ವಿಕ್ರಮ್, ನೃತ್ಯ ಆಕಾಶ್‌ ಅವರದಾ ಗಿದೆ. ಬೆಂಗಳೂರು, ತುಮಕೂರು ಕಡೆಗಳಲ್ಲಿ 45 ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಸೆನ್ಸಾರ್‌ನಿಂದ “ಯು’ ಪ್ರಮಾಣ ಪತ್ರ ಪಡೆದು ಕೊಂಡಿರುವ ಚಿತ್ರ ಡಿಸೆಂಬರ್‌ನಲ್ಲಿ ತೆರೆಗೆ ಬರುವ ಯೋಜನೆಯಲ್ಲಿದೆ.

Advertisement

Udayavani is now on Telegram. Click here to join our channel and stay updated with the latest news.

Next