Advertisement

Arrested: ಗಾಂಜಾ ಮಾರುತ್ತಿದ್ದ ಏರ್‌ಟೆಲ್‌ ಉದ್ಯೋಗಿ ಬಂಧನ

10:48 AM Nov 27, 2024 | Team Udayavani |

ಬೆಂಗಳೂರು: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪ ಮೇರೆಗೆ ಏರ್‌ಟೆಲ್‌ ಉದ್ಯೋಗಿಯನ್ನು ಸಂಪಿಗೆಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ಪಶ್ಚಿಮ ಬಂಗಾಳ ಮೂಲದ ಮಲೈಕುಜರ್‌(34) ಬಂಧಿತ. ಆರೋಪಿಯಿಂದ 2 ಲಕ್ಷ ರೂ. ಮೌಲ್ಯದ ಗಾಂಜಾ ವಶಕ್ಕೆ ಪಡೆಯಲಾಗಿದೆ. ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿರುವ ಆರೋಪಿ, ಸಂಪಿಗೆಹಳ್ಳಿಯಲ್ಲಿರುವ ಏರ್‌ಟೆಲ್‌ ಕಚೇರಿಯಲ್ಲಿ ಕೆಲಸ ಮಾಡಿಕೊಂಡಿದ್ದ.  ಪಶ್ಚಿಮ ಬಂಗಾಳದಿಂದ ರೈಲು ಮಾರ್ಗದ ಮೂಲಕ ಗಾಂಜಾ ತಂದು ನಗರದಲ್ಲಿ ಮಾರಾಟ ಮಾಡುತ್ತಿದ್ದ. ಇತ್ತೀಚೆಗೆ ಠಾಣೆ ವ್ಯಾಪ್ತಿಯ ನೀಲಗಿರಿ ತೋಪಿನ ಮುಂಭಾಗದ ರಸ್ತೆಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದಾಗ ದಾಳಿ ನಡೆಸಿ ಮಾಲು ಸಮೇತ ಆರೋಪಿಯನ್ನು ಬಂಧಿಸಲಾಗಿದೆ. ಠಾಣಾಧಿಕಾರಿ ಎಂ.ಚಂದ್ರಶೇಖರ್‌ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next