Advertisement

8-10 ತಿಂಗಳಲ್ಲಿ ವಿಮಾನ ಹಾರಾಟ ಆರಂಭ

04:55 PM May 15, 2021 | Suhan S |

ಶಿವಮೊಗ್ಗ: ಸಮೀಪದ ಸೋಗಾನೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅತ್ಯಾಧುನಿಕ ವಿಮಾನ ನಿಲ್ದಾಣ ಕಾಮಗಾರಿ ಭರದಿಂದ ಸಾಗಿದ್ದು ಮುಂದಿನ ಎಂಟು-ಹತ್ತು ತಿಂಗಳ ಅವ ಧಿಯಲ್ಲಿವಿಮಾನ ಸಂಚಾರ ಕಾರ್ಯರಂಭಗೊಳ್ಳಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.

Advertisement

ಶುಕ್ರವಾರ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿ ಪರಿಶೀಲಿಸಿದನಂತರ ಅವರು ಸುದ್ದಿಗಾರರಿಗೆ ಮಾಹಿತಿ ನೀಡಿ ಮಾತನಾಡಿದರು.

ಕೈಗೊಂಡ ಕಾಮಗಾರಿ ಈಗಾಗಲೇ ಶೇ.50 ರಷ್ಟು ಮುಗಿದಿದ್ದು ಉಳಿದಂತೆ ಟರ್ಮಿನಲ್‌,ವಸತಿಗೃಹ ಮುಂತಾದ ಕಾಮಗಾರಿಗಳು ಶೀಘ್ರದಲ್ಲಿ ಆರಂಭಗೊಳ್ಳಲಿವೆ ಎಂದರು.

ಪ್ರಸ್ತುತ ವಿಮಾನ ನಿಲ್ದಾಣದಲ್ಲಿ ಹಗಲು ಮತ್ತು ರಾತ್ರಿ ಸಮಯದಲ್ಲಿಯೂ ವಿಮಾನಗಳಸಂಚಾರಕ್ಕೆ ಅನುಕೂಲವಾಗುವಂತೆ ವ್ಯವಸ್ಥೆ ಕಲ್ಪಿಸಲಾಗಿದೆ. ಅಲ್ಲದೆ ಸಣ್ಣ ಮತ್ತು ಭಾರೀಪ್ರಮಾಣದ ವಿಮಾನಗಳು ಕೂಡ ಸಂಚರಿಸಲುಅನುಕೂಲ ಒದಗಿಸಲಾಗಿದೆ ಎಂದರು.

ವಿಮಾನ ನಿಲ್ದಾಣ ಕಾಮಗಾರಿಯಆರಂಭದಲ್ಲಿದ್ದ ಬಹುತೇಕ ಎಲ್ಲಾ ಸಮಸ್ಯೆಗಳಿಗೆಪರಿಹಾರ ಕಂಡುಕೊಳ್ಳಲಾಗಿದೆ. ವಿಶೇಷವಾಗಿ ರೈತರ ಭೂಮಿ, ರೈತರ ಭೂಮಿಗೆ ನೀರುಹರಿಯುವ ಕಾಲುವೆ ವ್ಯವಸ್ಥೆ, ಸಿದ್ದರ ಗುಡಿಮತ್ತು ಓತಿಘಟ್ಟ ಗ್ರಾಮಗಳ ಸಂಪರ್ಕಕ್ಕೆಪರ್ಯಾಯ ರಸ್ತೆ ಮಾರ್ಗ, ಭೂ ಮಾಲೀಕರಿಗೆನಿವೇಶನ ನೀಡುವಂತಹ ಅನೇಕ ಸಮಸ್ಯೆಗಳು ಇತ್ಯರ್ಥಗೊಂಡಿವೆ. ನಿವೇಶನಕ್ಕಾಗಿ ಕೃಷಿವಿಶ್ವವಿದ್ಯಾಲಯದ 25 ಎಕರೆ ಭೂಮಿಯನ್ನು ವಶಕ್ಕೆ ಪಡೆದು ನಿವೇಶನಗಳನ್ನಾಗಿಸಿ ಹಸ್ತಾಂತರಿಸಲಾಗುವುದು ಎಂದ ಅವರು, 2009 ರಲ್ಲಿ ಮಂಜೂರಾಗಿ ತಾಂತ್ರಿಕ ಕಾರಣಗಳಿಂದ ಸ್ಥಗಿತಗೊಂಡಿದ್ದ ಕಾಮಗಾರಿಯುಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರದೂರದೃಷ್ಟಿ ಮತ್ತು ನಿರೀಕ್ಷೆಯಂತೆ ಸಕಾಲದಲ್ಲಿ ಪೂರ್ಣಗೊಳ್ಳಲಿದೆ ಎಂದರು.

Advertisement

ನೂತನ ಕೈಗಾರಿಕೆಗಳು, ರಕ್ಷಣಾ ಘಟಕಗಳು ಸೇರಿದಂತೆ ಅನೇಕ ವಾಣಿಜ್ಯ ಉದ್ದೇಶಗಳಿಗಾಗಿಈ ವಿಮಾನ ನಿಲ್ದಾಣ ಸಹಕಾರಿಯಾಗಲಿದೆ. ಅಲ್ಲದೆ ನಿರೀಕ್ಷಿತ ಸಮಯದಲ್ಲಿ ವಿಮಾನ ಸಂಚಾರಕಾರ್ಯಾರಂಭಗೊಂಡು ಮಧ್ಯ ಕರ್ನಾಟಕದ ಕೇಂದ್ರವಾಗಿ ಶಿವಮೊಗ್ಗ ಗುರುತಿಸಿಕೊಳ್ಳಲಿದೆ ಎಂದರು.

ಉದ್ದೇಶಿತ ವಿಮಾನ ನಿಲ್ದಾಣ ಕಾಮಗಾರಿಗಳುನಿಗದಿತ ಅವ ಧಿಯಲ್ಲಿ ಪೂರ್ಣಗೊಳ್ಳಲುಸರ್ಕಾರ ಅಗತ್ಯ ಅನುದಾನ ಒದಗಿಸಿದೆ. ಈಕಾಮಗಾರಿ ಪೂರ್ಣಗೊಳಿಸಲು ಯಾವುದೇಅನುದಾನದ ಕೊರತೆ ಇಲ್ಲ ಎಂದ ಅವರು, ಇಲ್ಲಿನ ವಿದ್ಯುತ್‌ ಮಾರ್ಗದ ಬದಲಾವಣೆಗೆ 22ಕೋಟಿ ರೂಗಳನ್ನು ಖರ್ಚು ಮಾಡಲಾಗುವುದುಎಂದವರು ನುಡಿದರು. ರಾಜ್ಯ ಆರ್ಯವೈಶ್ಯಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ. ಎಸ್‌. ಅರುಣ್‌,ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್‌ ಸುನೀತಾ, ದತ್ತಾತ್ರಿ ಮತ್ತಿತರರು ಇದ್ದರು

Advertisement

Udayavani is now on Telegram. Click here to join our channel and stay updated with the latest news.

Next