Advertisement
ಉದ್ದೇಶಿತ ಯೋಜನೆಗೆ ಅಗತ್ಯವಿರುವ ಸಂಪನ್ಮೂಲ ಕ್ರೋಡೀಕರಣಕ್ಕೆ ಕಸರತ್ತು ನಡೆಸಿರುವ ಕೆ-ರೈಡ್ (ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ), 7,438 ಕೋಟಿ (800 ಮಿಲಿಯನ್ ಯೂರೋ) ಹಣವನ್ನು ಜರ್ಮನಿಯ ಕೆಎಫ್ಡಬ್ಲ್ಯು, ಯೂರೋಪಿಯನ್ ಇನ್‌ವೆಸ್ಟ್‌ಮೆಂಟ್ ಬ್ಯಾಂಕ್ ಮತ್ತು ಲಗ್ಜೆಂಬರ್ಗ್‌ನಿಂದ ದೀರ್ಘಾವಧಿ ಸಾಲ ಪಡೆಯುತ್ತಿದೆ. ಬರುವ ಸೆಪ್ಟೆಂಬರ್‌ನಲ್ಲಿ ಈ ಸಂಬಂಧದ ಒಡಂಬಡಿಕೆಗೆ ಪರಸ್ಪರ ಸಹಿ ಹಾಕಲಾಗುತ್ತಿದೆ. ಈ ಒಡಂಬಡಿಕೆಯಿಂದ ಲಭ್ಯವಾಗುವ ಹಣದಲ್ಲಿ ಕಾರಿಡಾರ್ 1 (ಬೆಂಗಳೂರು ನಗರ-ಯಲಹಂಕ- ದೇವನ ಹಳ್ಳಿ- ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಮತ್ತು 3 (ಕೆಂಗೇರಿ- ಬೆಂಗಳೂರು ನಗರ- ವೈಟ್ ಫೀಲ್ಡ್) ಮಾರ್ಗಕ್ಕೆ ಹೆಚ್ಚಿನ ಪಾಲು ಬಳಕೆಯಾಗಲಿದೆ. ಈ ಸಾಲವನ್ನು ಪೂರೈಸುವ ವಿದೇಶಿ ಹಣಕಾಸು ಏಜೆನ್ಸಿಗಳು ಈಗಾಗಲೇ 2 ಬಾರಿ ಭೇಟಿ ನೀಡಿ, ಪೂರಕವಾಗಿ ಸ್ಪಂದಿಸಿವೆ.
Related Articles
Advertisement
“ವಾಸ್ತವವಾಗಿ ಕಾರಿಡಾರ್-1 ಮೊದಲ ಆದ್ಯತೆ ಆಗಿತ್ತು. ಆದರೆ, ಹಲವು ಕಾರಣಗಳಿಂದ ಕೊನೇ ಆದ್ಯತೆ ಆಗಿರುವುದು ಬೇಸರದ ಸಂಗತಿ. ಈಗಲಾದರೂ ಚುರುಕುಗೊಂಡಿರುವುದು ಒಳ್ಳೆಯ ಬೆಳವಣಿಗೆ. ಆದರೆ, ಉಳಿದ ಕಾರಿಡಾರ್‌ಗಳು ಮುಗಿಯುವವರೆಗೆ ಉದ್ದೇಶಿತ ವಿಮಾನ ನಿಲ್ದಾಣ ಮಾರ್ಗದ ಕಾಮಗಾರಿಗೆ ಕೈಹಾಕದಿರುವುದು ಅಥವಾ “ನಮ್ಮ ಮೆಟ್ರೋ’ ಯೋಜನೆಯೊಂದಿಗೆ ತಳುಕುಹಾಕಿ ಇದನ್ನು ನಿರ್ಲಕ್ಷಿಸುವುದು ಸರಿ ಅಲ್ಲ’ ಎಂದೂ ಅವರು ತಿಳಿಸುತ್ತಾರೆ.
ಎರಡು ಡಿಪೋಗಳು; ಭಿನ್ನ ವಿನ್ಯಾಸ: ಉಪನಗರ ರೈಲು ಯೋಜನೆಯಲ್ಲಿ ದೇವನಹಳ್ಳಿ ಮತ್ತು ಸೋಲದೇವನಹಳ್ಳಿ ಸೇರಿ ಎರಡು ಡಿಪೋಗಳು ತಲೆಯೆತ್ತಲಿವೆ. ಯಾವ ಮೂಲೆಯಿಂದ ಮತ್ತು ಯಾವ ಕಾರಿಡಾರ್‌ನಿಂದಾದರೂ ಎರಡೂ ಡಿಪೋಗಳಿಗೆ ರೈಲುಗಳು ಹೋಗುವಂತೆ ವಿನ್ಯಾಸಗೊಳಿಸಲಾಗುತ್ತಿದೆ. ಪ್ರಸ್ತುತ “ನಮ್ಮ ಮೆಟ್ರೋ’ದಲ್ಲಿ ಪೀಣ್ಯ ಮತ್ತು ಬೈಯಪ್ಪನಹಳ್ಳಿ ಸೇರಿ ಎರಡು ಡಿಪೋಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಆಯಾ ಕಾರಿಡಾರ್‌ನಲ್ಲಿ ಕಾರ್ಯಾಚರಣೆ ಮಾಡುತ್ತಿರುವ ರೈಲು ಆಯಾ ಕಾರಿಡಾರ್‌ನಲ್ಲಿ ಬರುವ ಡಿಪೋಗೆ ಮಾತ್ರ ಹೋಗುವಂತೆ ವಿನ್ಯಾಸ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಉಪನಗರ ರೈಲು ಯೋಜನೆ ಡಿಪೋಗಳು ತುಸು ಭಿನ್ನ ಎನ್ನಲಾಗಿದೆ.
-ವಿಜಯಕುಮಾರ ಚಂದರಗಿ