Advertisement

ಇಂದಿನಿಂದ 10 ರೂ.ಗಳಲ್ಲಿ ಏರ್‌ಪೋರ್ಟ್‌ಗೆ!

01:41 PM Jan 04, 2021 | Team Udayavani |

ಬೆಂಗಳೂರು: ನಗರದಿಂದ ಆಗಮಿಸಲಿರುವ ರೈಲುಗಳನ್ನು ಬರಮಾಡಿಕೊಳ್ಳಲು ಏರ್‌ ಪೋರ್ಟ್‌ನ ಹಾಲ್ಟ್  ಸ್ಟೇಷನ್‌ ಸಕಲ ರೀತಿ ಸಜ್ಜಾಗಿದೆ.

Advertisement

ರೈಲುಗಳ ವೇಳಾಪಟ್ಟಿ, ಪ್ರಯಾಣಿಕರ ಆಸನ ವ್ಯವಸ್ಥೆ, ಟಿಕೆಟ್‌ ಕೌಂಟರ್‌ನಿಂದ ಹಿಡಿದು ಪ್ರತಿಯೊಂದು ಸೌಲಭ್ಯಗಳನ್ನೂ ಈಗಾಗಲೇ ಕಲ್ಪಿಸಲಾಗಿದೆ. ಬೆಳಗಿನಜಾವ 4.45ಕ್ಕೆ ಕ್ರಾಂತಿವೀರಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಡುವ ಮೊದಲ ರೈಲು, 5.50ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಲ್ಟ್  ಸ್ಟೇಷನ್‌ (ಕೆಐಎಡಿ) ತಲುಪಲಿದೆ.

ವಿಮಾನಗಳ ದಟ್ಟಣೆ ಅವಧಿಗೆ ಅನುಗುಣವಾಗಿ ಈ ರೈಲು ಸೇವೆ ಕಲ್ಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಬೆಳಗಿನಜಾವ ಮತ್ತುತಡರಾತ್ರಿ ರೈಲುಗಳು ಕಾರ್ಯಾಚರಣೆ ಮಾಡಲಿವೆ. ಮೊದಲರೈಲಿನಲ್ಲೇ ವಿಮಾನ ಪ್ರಯಾಣಿಕರು ಹಾಗೂ ಏರ್‌ಪೋರ್ಟ್‌ ಸಿಬ್ಬಂದಿ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಸಂಸದಪಿ.ಸಿ.ಮೋಹನ್‌, ವಿಭಾಗೀಯ ರೈಲ್ವೆ ವ್ಯವಸ್ಥಾಪಕ ಎ.ಕೆ.ವರ್ಮ,ರೈಲ್ವೆಅಧಿಕಾರಿಗಳು ಇದಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ.

ಪ್ರಸ್ತುತ ನಗರದ ಹೃದಯಭಾಗದಿಂದ ಏರ್‌ಪೋರ್ಟ್‌ಗೆ ತೆರಳಲು ವೋಲ್ವೊ ಬಸ್‌ಗೆ 270 ರೂ. ಆಗುತ್ತಿತ್ತು. ಅದೇ ರೀತಿ,ಕ್ಯಾಬ್‌ಗ 600-1,000 ರೂ. ಸುರಿಯಬೇಕಿತ್ತು. ಜತೆಗೆಸಂಚಾರದಟ್ಟಣೆ ಹಾಗೂ ಸಮಯವೂ ವ್ಯಯ ಆಗುತ್ತಿತ್ತು.ಆದರೆ, ಇನ್ಮುಂದೆ ಕೇವಲ 10 ರೂ.ಗಳಲ್ಲಿ (ಕಂಟೋನ್ಮೆಂಟ್‌ಮೂಲಕ 15 ರೂ.) ಕಡಿಮೆ ಅವಧಿಯಲ್ಲಿ ವಿಮಾನ ನಿಲ್ದಾಣಕ್ಕೆಪ್ರಯಾಣಿಕರನ್ನು ರೈಲು ತಲುಪಿಸಲಿದೆ. ಅಲ್ಲಿಂದ ಈಗಾಗಲೇ ಬಿಐಎಎಲ್‌ನಿಂದ ಉಚಿತವಾಗಿ ಶೆಟಲ್‌ ಸೇವೆಗಳ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ : ನೆಲ್ಯಾಡಿ: ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಯುವತಿ ಆತ್ಮಹತ್ಯೆ

Advertisement

ಸದ್ಯಕ್ಕೆ 50ರಿಂದ 60 ನಿಮಿಷಗಳ ಪ್ರಯಾಣ ಇದಾಗಿದೆ. ಪ್ರಯಾಣಿಕರ ಸ್ಪಂದನೆ ನೋಡಿಕೊಂಡು, ಮುಂದಿನ ದಿನಗಳಲ್ಲಿನೇರ ತಡೆರಹಿತ ರೈಲುಗಳನ್ನು ಪರಿಚಯಿಸುವ ಚಿಂತನೆಯೂಇದೆ. ಆಗ ಪ್ರಯಾಣ ಸಮಯವು ಅರ್ಧಕ್ಕರ್ಧ ತಗ್ಗಲಿದೆ ಎಂದುನೈರುತ್ಯ ರೈಲ್ವೆ ಉಪ ಪ್ರಧಾನ ವ್ಯವಸ್ಥಾಪಕಿ ಹಾಗೂ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ತಿಳಿಸಿದ್ದಾರೆ.

ಸದುಪಯೋಗ ಪಡೆಯಿರಿ: ಸಿಎಂ :

ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯವಿಮಾನನಿಲ್ದಾಣಹಾಲ್ಟ್ಸ್ಟೇಷನ್‌ಗೆಸೋಮವಾರ ದಿಂದ ರೈಲು ಸೇವೆ ಆರಂಭಗೊಳ್ಳಲಿದೆ. ಯಾವುದೇ ಸಂಚಾರದಟ್ಟಣೆಕಿರಿಕಿರಿ ಇಲ್ಲದೆ ಜನ ಪ್ರಯಾಣಿಸಬಹುದಾಗಿದ್ದು, ಇದರ ಸದುಪಯೋಗ ಪಡೆಯಬೇಕುಎಂದು ಮುಖ್ಯ ಮಂತ್ರಿ ಬಿ.ಎಸ್‌.ಯಡಿಯೂರಪ್ಪ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next