Advertisement

Kasaragod ಚಿಗುರುಪಾದೆಯಲ್ಲಿ ಬಿದ್ದ ವಿಮಾನ ಮಾದರಿ ಡ್ರೋನ್‌!

12:15 AM May 02, 2024 | Team Udayavani |

ಕಾಸರಗೋಡು: ಜನ ನಿಬಿಡ ಪ್ರದೇಶವಾದ ಮಂಜೇಶ್ವರದ ಚಿಗುರುಪಾದೆಯಲ್ಲಿ ಬುಧವಾರ ವಿಮಾನದ ಮಾದರಿಯ ಡ್ರೋಣ್‌ ಪತ್ತೆಯಾಗಿದ್ದು ಸ್ವಲ್ಪ ಕಾಲ ಆತಂಕಕ್ಕೆ ಕಾರಣವಾಯಿತು.

Advertisement

ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಮಂಜೇಶ್ವರ ಪೊಲೀಸರು ಪರಿಶೀಲನೆ ನಡೆಸಿದರು. ಬಳಿಕ ಅದು ಗೇಲ್‌ ಕಂಪೆನಿಗೆ ಸೇರಿದ್ದು ಎಂದು ತಿಳಿದು ಬಂತು. ಗ್ಯಾಸ್‌ ಪೈಪ್‌ಲೈನ್‌ಗೆ ಸಂಬಂಧಿಸಿದಂತೆ ಸರ್ವೇ ನಡೆಸುತ್ತಿದ್ದಾಗ ಜಿಪಿಎಸ್‌ ಸಂಪರ್ಕ ಕಡಿದುಕೊಂಡು ಚಿಗರುಪಾದೆಯಲ್ಲಿ ಬಿದ್ದಿತ್ತು. ಗೇಲ್‌ ಕಂಪೆನಿ ಸಿಬಂದಿ ಅದನ್ನು ಪಡೆದುಕೊಂಡು ಹೋಗಿದ್ದಾರೆ.

ವಿಮಾನ ಮಾದರಿಯ ಡ್ರೋನ್‌ ಅನ್ನು ವೀಕ್ಷಿಸಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next