ಹೊಸದಿಲ್ಲಿ : ಇಲ್ಲಿನ ಕರೋಲ್ ಬಾಗ್ ಸಮೀಪದಲ್ಲಿರುವ 108 ಅಡಿ ಎತ್ತರ ಹನುಮಾನ್ ಮೂರ್ತಿಯನ್ನು ವಾಹನ ದಟ್ಟನೆ ಮತ್ತು ಅತಿಕ್ರಮಣ ನಿವಾರಣೆಗಾಗಿ ವಿಮಾನದ ಮೂಲಕ ಮೇಲೆತ್ತಿ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ದಿಲ್ಲಿ ಹೈಕೋರ್ಟ್ ಸಲಹೆ ನೀಡಿದೆ.
ಕರೋಲ್ ಬಾಗ್‌ನಲ್ಲಿನ ಜನ ಹಾಗೂ ವಾಹನ ದಟ್ಟನೆ, ಹಲವು ಅನಧಿಕೃತ ಕಟ್ಟಡಗಳ ನಿರ್ಮಾಣ ಮತ್ತು ಅತಿಕ್ರಮಣವನ್ನು ತೆರವುಗೊಳಿಸಬೇಕೆಂದು ಕೋರಿ ಸರಕಾರೇತರ ಸೇವಾ ಸಂಘಟನೆಯೊಂದು ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯನ್ನು ದಿಲ್ಲಿ ಹೈಕೋರ್ಟ್ ನಲ್ಲಿ ದಾಖಲಿಸಿತ್ತು.
ಅಮೆರಿಕದಲ್ಲಿ ದೊಡ್ಡ ದೊಡ್ಡ ಗಗನ ಚುಂಬಿ ಕಟ್ಟಡಗಳನ್ನೇ ಇಡಿಯಾ ಏರ್ ಲಿಫ್ಟ್ ಮಾಡಿ ಸ್ಥಳಾಂತರಿಸುತ್ತಾರೆ ಎಂದು ಉಲ್ಲೇಖೀಸಿದ ಮುಖ್ಯ ನ್ಯಾಯಾಧೀಶೆ ಗೀತಾ ಮಿತ್ತಲ್ ಮತ್ತು ಜಸ್ಟಿಸ್ ಸಿ ಹರಿ ಶಂಕರ್ ಅವರು ಕರೋಲ್ ಬಾಗ್ ಸಮೀಪ ವಿರುವ 108 ಅಡಿ ಎತ್ತರದ ಹನುಮಾನ್ ವಿಗ್ರಹವನ್ನು ಏರ್ ಲಿಫ್ಟ್ ಮೂಲಕ ಸ್ಥಳಾಂತರಿಸಿ ಇಲ್ಲಿನ ಅತಿಕ್ರಮಣವನ್ನು ತೆರವುಗೊಳಿಸುವ ನಿಟ್ಟಿನಲ್ಲಿ ದಿಲ್ಲಿ ಪೌರಾಡಳಿತೆಯು ದಿಲ್ಲಿ ರಾಜ್ಯಪಾಲರಾದ ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರೊಡನೆ ಮಾತುಕತೆ ನಡೆಸಬೇಕು ಎಂದು ಸೂಚಿಸಿತು.