ಹೊಸದಿಲ್ಲಿ: ವಿಮಾನ ಅಪಹರಣ ಬೆದರಿಕೆಗೆ ಸಂಬಂಧಿಸಿದ ಇ-ಮೇಲ್‌ವೊಂದು ಪೊಲೀಸರು ಹಾಗೂ ಸಿಐಎಸ್‌ಎಫ್ನ ನಿದ್ದೆಗೆಡಿಸಿದ್ದು, ರವಿವಾರ ಮುಂಬಯಿ, ಹೈದರಾಬಾದ್ ಹಾಗೂ ಚೆನ್ನೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಗರಿಷ್ಠ ಭದ್ರತೆ ಏರ್ಪಡಿಸಲಾಗಿತ್ತು.
“ವಿಮಾನ ಹೈಜಾಕ್ ಕುರಿತು 6 ಮಂದಿ ಮಾತನಾಡುತ್ತಿರುವುದನ್ನು ಆಲಿಸಿದೆ’ ಎಂದು ಹೇಳಿ ಮಹಿಳೆಯೊಬ್ಬರು ಪೊಲೀಸ
ರಿಗೆ ಇ-ಮೇಲ್ ರವಾನಿಸಿದ್ದು, ರವಿವಾರ ಈ 3 ಪ್ರಮುಖ ಏರ್‌ಪೋರ್ಟ್‌ಗಳು ಸೇರಿ ದೇಶಾದ್ಯಂತದ ವಿಮಾನ ನಿಲ್ದಾಣಗಳಲ್ಲಿ ಹೈಅಲರ್ಟ್ ಘೋಷಿಸಲಾಗಿತ್ತು. ಗಣ ರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಏರ್ಪಡಿಸುವ ಮಾದರಿಯ ಬಿಗಿಭದ್ರತೆಯನ್ನು ಕೈಗೊಳ್ಳಲಾಗಿತ್ತು.
ಬೆದರಿಕೆ ಬಂದಿದ್ದು ಎಲ್ಲಿಂದ?: ಶನಿವಾರ ರಾತ್ರಿ ಮುಂಬಯಿ ಪೊಲೀಸರಿಗೆ ಹೈದರಾಬಾದ್ ಮೂಲದ ಮಹಿಳೆಯೊಬ್ಬರಿಂದ ಇ-ಮೇಲ್‌ವೊಂದು ಬಂದಿತ್ತು. “ಇಲ್ಲಿಂದ ನೀವು 23 ಮಂದಿಯೂ ಬೇರೆ ಬೇರೆ ಕಡೆಗೆ ಹೋಗಿ, ಮೂರು ನಗರಗಳ ವಿಮಾನಗಳನ್ನು ಏರಿ, ಅವುಗಳನ್ನು ಅಪಹರಿಸಬೇಕು’ ಎಂದು 6 ಮಂದಿ ಮಾತನಾಡುತ್ತಿರುವುದು ನನ್ನ ಕಿವಿಗೆ ಬಿದ್ದಿದೆ. ಅವರು ವಿಮಾನ ಹೈಜಾಕ್ ಮಾಡು ವುದು ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ, ದೇಶದ ಒಬ್ಬ ಪ್ರಜೆಯಾಗಿ ನಾನು ಈ ವಿಚಾರವನ್ನು ನಿಮಗೆ ತಿಳಿಸಬಯಸುತ್ತೇನೆ ಎಂದು ಆಕೆ ಇ-ಮೇಲ್‌ನಲ್ಲಿ ಉಲ್ಲೇಖೀಸಿ ದ್ದರು. ಬೆದರಿಕೆಯು ಹುಸಿಯಾಗಿರುವ ಸಾಧ್ಯತೆ ಅಧಿಕವಾಗಿದ್ದರೂ ನಾವು ಎಲ್ಲ ರೀತಿ ಭದ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಸಿಐಎಸ್‌ಎಫ್ ಡಿಜಿ ತಿಳಿಸಿದ್ದಾರೆ.