Advertisement

ಬ್ರಿಸ್ಬೇನ್ ಕರಾವಳಿಯಲ್ಲಿ ವಿಮಾನ ಪತನ: ಇಬ್ಬರು ಮಕ್ಕಳು ಸೇರಿ ನಾಲ್ಕು ಮಂದಿ ಸಾವು

12:39 PM Dec 19, 2021 | Team Udayavani |

ಬ್ರಿಸ್ಬೇನ್: ಭಾನುವಾರ ಬೆಳಗ್ಗೆ ಆಸ್ಟ್ರೇಲಿಯಾದ ಪೂರ್ವ ಕರಾವಳಿಯಲ್ಲಿ ಲಘು ವಿಮಾನವೊಂದು ನೀರಿನಲ್ಲಿ ಪತನಗೊಂಡಿದ್ದು, ಇಬ್ಬರು ಮಕ್ಕಳು ಸೇರಿದಂತೆ ವಿಮಾನದಲ್ಲಿದ್ದ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Advertisement

69 ವರ್ಷದ ಪುರುಷ ಪೈಲಟ್ ಮೂವರು ಪ್ರಯಾಣಿಕರನ್ನು ಜಾಲಿ ರೈಡ್‌ ಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಬ್ರಿಸ್ಬೇನ್‌ನ ಈಶಾನ್ಯಕ್ಕೆ ಜೌಗು ಪ್ರದೇಶಕ್ಕೆ ಇಳಿಯಿತು.

ಇದನ್ನೂ ಓದಿ:ಮಹಾರಾಷ್ಟ್ರದ ಸಿಎಂ ಪತ್ರಕ್ಕೆ ಪ್ರಧಾನಿ ಮೋದಿ ಸರಿಯಾದ ಉತ್ತರ ಕೊಡುತ್ತಾರೆ: ಸಚಿವ ಈಶ್ವರಪ್ಪ

ರಾಕ್‌ವೆಲ್ ಇಂಟರ್‌ ನ್ಯಾಶನಲ್ ವಿಮಾನವು ಮೊರೆಟನ್ ಕೊಲ್ಲಿಯಲ್ಲಿ ತಲೆಕೆಳಗಾಗಿ ತೇಲುತ್ತಿರುವುದನ್ನು ಚಿತ್ರಗಳು ತೋರಿಸಿವೆ.

ಆರರಿಂದ ಎಂಟು ವಾರಗಳಲ್ಲಿ ಅಪಘಾತದ ಸಂಭವನೀಯ ಕಾರಣದ ವರದಿಯನ್ನು ಪೂರ್ಣಗೊಳಿಸಲಾಗುವುದು ಎಂದು ಆಸ್ಟ್ರೇಲಿಯಾದ ಸಾರಿಗೆ ಸುರಕ್ಷತಾ ಮಂಡಳಿಯ ಆಯುಕ್ತ ಆಂಗಸ್ ಮಿಚೆಲ್ ಹೇಳಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next