Advertisement

ಮತ್ತೊಂದು ವಾಯುಪಡೆ ವಿಮಾನ ಅವಘಡ; ತೆಲಂಗಾಣದಲ್ಲಿ ಪತನ 

01:31 PM Nov 28, 2018 | Team Udayavani |

ಯಾದಾದ್ರಿ ಭುವನಗಿರಿ (ತೆಲಂಗಾಣ): ಜಿಲ್ಲೆಯ ಬಾಹುಪೇಟ ಎಂಬಲ್ಲಿ ಬುಧವಾರ ವಾಯುಪಡೆಯ ವಿಮಾನವೊಂದು ಪತನಗೊಂಡಿದ್ದು , ಪೈಲಟ್‌ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ.

Advertisement

ವರದಿಯಾದಂತೆ ತರಬೇತಿ ಪಡೆಯುತ್ತಿದ್ದ ಪೈಲಟ್‌ ಹಕೀಂಪೇಟ್‌ ವಾಯು ಪಡೆ ಕೇಂದ್ರದಿಂದ ತರಬೇತಿ ನಿಮಿತ್ತ ಹಾರಾಟಕ್ಕೆ ಒಯ್ದ ವೇಳೆ ಅವಘಡ ಸಂಭವಿಸಿದೆ.

ವಿಮಾನ ಪತನವಾದ ಬಳಿಕ ಬೆಂಕಿ ಕಾಣಿಸಿಕೊಂಡಿದೆ.

ಗಾಯಾಳು ಪೈಲಟ್‌ರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next